ನವದೆಹಲಿ : ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರ್ಕಾರದ ಕುರಿತು ಟೀಕಾ ಪ್ರಹಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೇಡ್ ನೀಡಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ಮೋದಿ ಅವರ ಕಳೆದುಹೋಗಿದ್ದ ಅಂಕಪಟ್ಟಿ/ರಿಪೋರ್ಟ್ ಕಾರ್ಡ್ ಇದೀಗ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ರಿಪೋರ್ಟ್ ಕಾರ್ಡ್ ಅನ್ನು ಕರ್ನಾಟಕ ಪೀಪಲ್ಸ್ ಕೋಆಪರೇಟಿವ್ ಎಂಬ ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ. 


ಇದರಲ್ಲಿ ವಿದ್ಯಾರ್ಥಿಯ ಹೆಸರು : ನರೇಂದ್ರ ಮೋದಿ, ಅವಧಿ: 2014ರಿಂದ ಇಲ್ಲಿಯವರೆಗೆ, ಕ್ರಮ ಸಂಖ್ಯೆ: 282, ರಕ್ತದ ಗುಂಪು: ಬಿಜೆಪಿ ಎಂದು ನಮೂದಿಸಲಾಗಿದ್ದು, ಇದರ ಕೆಳಗೆ ವಿಷಯಗಳು, ಅಭಿಪ್ರಾಯ ಮತ್ತು ಗ್ರೇಡ್ ಹೀಗೆ ಮೂರು ವಿಭಾಗಗಳನ್ನು ಮಾಡಲಾಗಿದೆ.


ಅದರಲ್ಲಿ, ಉದ್ಯೋಗಸೃಷ್ಟಿಯಲ್ಲಿ ಡಿ ಗ್ರೇಡ್, ರಕ್ಷಣಾ ವಿಷಯದಲ್ಲಿ ಸಿ ಗ್ರೇಡ್, ಆರೋಗ್ಯ ವಿಷಯದಲ್ಲಿ ಎಫ್ ಗ್ರೇಡ್, ಆರ್ಥಿಕ ವಿಷಯದಲ್ಲಿ ಎಫ್ ಗ್ರೇಡ್, ಮಹಿಳಾ ರಕ್ಷಣೆ ವಿಷಯದಲ್ಲಿ ಸಿ ಗ್ರೇಡ್ ಮತ್ತು ಕದಿ ಹೇಳುವುದರಲ್ಲಿ ಎ++ ನೀಡಲಾಗಿದೆ. ಉಳಿದಂತೆ ಹಿಂಸೆ ಮತ್ತು ಕೋಮುವಾದ ವಿಭಾಗಗಳಲ್ಲಿ ಹೌದು ಎಂದು ನಮೂದಿಸಲಾಗಿದ್ದು, ಒಟ್ಟಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ವಿಷಯಗಳಲ್ಲಿ ಡಿ ಗ್ರೇಡ್ ಎಂದು ಹೇಳುವ ಮೂಲಕ ಅಸಮರ್ಥ ಎಂದು ಕಾಂಗ್ರೆಸ್ ಮೂದಲಿಸಿದೆ.



ಇದೀಗ ಈ ರಿಪೋರ್ಟ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.