ನವದೆಹಲಿ: ಭಾರತೀಯ ವಿಜ್ಞಾನಿಗಳು ಇದುವರೆಗಿನ ಅತ್ಯಂತ ದೂರದ ಗ್ಯಾಲಕ್ಸಿ AUDFs01 ಅನ್ನು ಪತ್ತೆಹಚ್ಚಿದ್ದಾರೆ. ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ - ಆಸ್ಟ್ರೋಸಾಟ್ ಸಹಾಯದಿಂದ ಇದನ್ನು ಕಂಡು ಹಿಡಿಯಲಾಗಿದ್ದು. ಭಾರತೀಯ ವಿಜ್ಞಾನಿಗಳ ಈ ಸಾಧನೆಗೆ  ನಾಸಾ ಭೇಷ್ ಎಂದಿದೆ. ಈ ಸಂಶೋಧನೆಗಳನ್ನು ಪುಣೆ ಮೂಲದ ಖಗೋಳವಿಜ್ಞಾನ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಅಂತರ ವಿಶ್ವವಿದ್ಯಾಲಯ ಕೇಂದ್ರವಾದ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ (ಐಯುಸಿಎಎ) ವಿಜ್ಞಾನಿಗಳು ಮಾಡಿದ್ದಾರೆ.), ಭೂಮಿಯಿಂದ ಈ ಆಕಾಶಗಂಗೆ ಸುಮಾರು 9.30 ಶತಕೋಟಿ ಪ್ರಕಾಶ ವರ್ಷಗಳಷ್ಟು ದೂರದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೊಸ ಆಕಾಶಗಂಗೆ ಸದ್ಯ ಜಗತ್ತಿನ ಮುಂದೆ ಅಸ್ತಿತ್ವದಲ್ಲಿದ್ದು. ಇದನ್ನು AUDFs01 ಎಂದು ಹೆಸರಿಸಲಾಗಿದೆ.


COMMERCIAL BREAK
SCROLL TO CONTINUE READING

NASA ಹೇಳಿದ್ದೇನು?
ಭಾರತೀಯ ವಿಜ್ಞಾನಿಗಳ ಈ ಆವಿಷ್ಕಾರದ ಒಂದು ದಿನದ ಬಳಿಕ, ನಾಸಾ ಭಾರತೀಯ ವಿಜ್ಞಾನಿಗಳನ್ನು ಹಾಡಿ ಹೋಗಲಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನಾಸಾದ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಫೆಲಿಷಿಯಾ ಚೌ, "ಈ ಹೊಸ ಆವಿಷ್ಕಾರದ ಪರಿಶೋಧಕರನ್ನು ನಾಸಾ ಅಭಿನಂದಿಸುತ್ತದೆ" ಎಂದು ಹೇಳಿದ್ದಾರೆ. ಜೊತೆಗೆ "ವಿಜ್ಞಾನ ಎಲ್ಲರಿಗಾಗಿ ಹುಡುಕಾಟ ನಡೆಸುತ್ತದೆ ಹಾಗೂ ಇದರಿಂದ ನಮ್ಮ ಮೂಲ ಅಂದರೆ ನಾವು ಎಲ್ಲಿಂದ ಬಂದೆವು ಎಂಬುದನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ" ಎಂದಿದ್ದಾರೆ.


IUCAA ಈ ವಿಶೇಷ ಸಾಧನೆ ಮಾಡಿದೆ
ಪುಣೆ ಮೂಲದ ಐಯುಸಿಎಎ ಯ ಅಂತರರಾಷ್ಟ್ರೀಯ ವಿಜ್ಞಾನಿಗಳು ಆಸ್ಟ್ರೋಸಾಟ್ ಮೂಲಕ ಈ ಸಾಧನೆಯನ್ನು ಮಾಡಿದ್ದು, ಖಗೋಳಶಾತ್ರದಲ್ಲಿ ಇದೊಂದು ಪ್ರಮುಖ ಆವಿಷ್ಕಾರವೆಂದೆ ಪರಿಗಣಿಸಲಾಗುತ್ತಿದೆ.  ಖಗೋಳ ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡದ ನೇತೃತ್ವವನ್ನು ಐಯುಸಿಎಎಯ ಸಹಾಯಕ ಪ್ರಾಧ್ಯಾಪಕ ಡಾ. ಕನಕ್ ಸಹಾ ವಹಿಸಿದ್ದಾರೆ. ಈ ಆವಿಷ್ಕಾರದ ಕುರಿತು ಆಗಸ್ಟ್ 24 ರಂದು 'ನೇಚರ್ ಆಸ್ಟ್ರೋನಾಮಿ'ಯಾ ಸಂಚಿಕೆಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಸಂಶೋಧನೆಗಳನ್ನು ಭಾರತ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಅಮೆರಿಕ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ ವಿಜ್ಞಾನಿಗಳು ಸೇರಿದಂತೆ ಅಂತರರಾಷ್ಟ್ರೀಯ ತಜ್ಞರ ತಂಡ ಮಾಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಕಾರ್ಯಭಾರ) ಡಾ. ಜಿತೇಂದ್ರ ಸಿಂಗ್, " ಭಾರತದ ಮೊದಲ ಬಹು-ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯ "ಆಸ್ಟ್ರೋಸಾಟ್" ಭೂಮಿಯಿಂದ ಸುಮಾರು 9.3 ಶತಕೋಟಿ ಪ್ರಕಾಶವರ್ಷಗಳಷ್ಟು  ದೂರದಲ್ಲಿರುವ ನಕ್ಷತ್ರ ಪುಂಜದಿಂದ ಹೊರಹೊಮ್ಮುವ ವಿಪರೀತ-ನೆರಳಾತೀತ ಬೆಳಕನ್ನು ಪತ್ತೆ ಮಾಡಿದೆ ಎಂಬುದು ಹೆಮ್ಮೆಯ ವಿಷಯ" ಎಂದಿದ್ದಾರೆ.



ಈ ಸಂಶೋಧನೆಯ ಕುರಿತು ಹೇಳಿಕೆ ನೀಡಿರುವ ಐಯುಸಿಎಎ ನಿರ್ದೇಶಕ ಡಾ.ಸೋಮಕ್ ರೈ ಚೌಧರಿ, 'ಈ ಆವಿಷ್ಕಾರವು ಡಾರ್ಕ್ ಏಜ್ ಗೆ ಸಂಬಂಧಿಸಿದ ಒಂದು ಪ್ರಮುಖ ಆವಿಷ್ಕಾರವಾಗಿದೆ, ಇದರ ಮೂಲಕ ನಾವು ಬೆಳಕು ಹೇಗೆ ಜನಿಸಿತು ಎಂಬುದರ ಕುರಿತು ತಿಳಿಯಬಹುದು. ಆದರೆ ಇದಕ್ಕಾಗಿ ಇನ್ನು ಬಹಳಷ್ಟು ಕೆಲಸ ಮಾಡಬೇಕಾಗಿದೆ. ನನ್ನ ಸಹೋದ್ಯೋಗಿಗಳ ಈ ಸಾಧನೆಯಿಂದ ನಾನು ರೋಮಾಂಚನಗೊಂಡಿದ್ದೇನೆ ' ಎಂದಿದ್ದಾರೆ.


NASA ಹಬ್ಬಲ್ ಟೆಲಿಸ್ಕೊಪ್ ಮಾಡದ ಸಾಧನೆಯನ್ನು ASTROSAT ಮಾಡಿದೆ
ಇದೇ ಕಾರ್ಯಸಾಧನೆಯನ್ನು ಮಾಡಲು ನಾಸಾ ಹಬಲ್ ಬಾಹ್ಯಾಕಾಶ ದೂರದರ್ಶಕ-ಎಚ್‌ಎಸ್‌ಟಿಯನ್ನು ನಿಯೋಜಿಸಿದೆ, ಇದು ಆಸ್ಟ್ರೋಸಾಟ್‌ನ ಯುವಿಐಟಿ ದೂರದರ್ಶಕಕ್ಕಿಂತ ಗಾತ್ರದಲ್ಲಿ ಕಾಗೂ ವೈಶಿಷ್ಟ್ಯ ಎರಡರಲ್ಲಿಯೂ ಕೂಡ ದೊಡ್ಡದಾಗಿದೆ, ಆದರೆ ಆಸ್ಟ್ರೋಸಾಟ್‌ನ ಯುವಿಐಟಿ ಮಾಡಿದ ಈ ಸಾಧನೆಯನ್ನು ಹಬಲ್ ಕೂಡ ಇದುವರೆಗೆ ಮಾಡಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.