ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲು ಪ್ರಯತ್ನಿಸುವ ಮೂಲಕ ಭಾರತದ ಚಂದ್ರಯಾನ -2 ಜಗತ್ತಿನ ಗಮನ ಸೆಳೆಯಿತು. ಆದರೆ ಚಂದ್ರನನ್ನು ತಲುಪುವ ಮುನ್ನ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಸ್ವಲ್ಪದರಲ್ಲೇ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿತು.


COMMERCIAL BREAK
SCROLL TO CONTINUE READING

ಆದಾಗ್ಯೂ ಭಾರತದ ಈ ಪ್ರಯತ್ನದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಸುರಿಮಳೆ ಹರಿದು ಬಂದಿದೆ. ಇಸ್ರೋದ ಈ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾ ಇಸ್ರೋ ತನ್ನ ಪ್ರಯಾಣದಿಂದ ನಮಗೆ ಸ್ಫೂರ್ತಿ ನೀಡಿದೆ ಮತ್ತು ಬಾಹ್ಯಾಕಾಶ ಕಠಿಣ ಎನ್ನುವುದನ್ನು ತಿಳಿಸಿದೆ ಹೇಳಿದೆ. ಸೌರಮಂಡಲವನ್ನು ಒಟ್ಟಾಗಿ ಅನ್ವೇಷಿಸಲು ಭವಿಷ್ಯದ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಎಂದು ನಾಸಾ ಹೇಳಿದೆ.



'ಬಾಹ್ಯಾಕಾಶ ನಿಜಕ್ಕ ಕಷ್ಟಕರ, ನಾವು  ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಇಸ್ರೋದ  ಚಂದ್ರಯಾನ-2 ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ನಿಮ್ಮ ಪ್ರಯಾಣದಿಂದ ನೀವು ನಮಗೆ ಸ್ಫೂರ್ತಿ ನೀಡಿದ್ದೀರಿ ಮತ್ತು ನಮ್ಮ ಸೌರವ್ಯೂಹವನ್ನು ಒಟ್ಟಿಗೆ ಅನ್ವೇಷಿಸಲು ಭವಿಷ್ಯದ ಅವಕಾಶಗಳನ್ನು ಎದುರು ನೋಡುತ್ತೀದ್ದೇವೆ' ಎಂದು ನಾಸಾ ಟ್ವೀಟ್ ಮಾಡಿದೆ.    


ಇಸ್ರೋ ಹಿನ್ನಡೆ ಅನುಭವಿಸಿದರೂ, ವಿಕ್ರಮ್ ಲ್ಯಾಂಡರ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನವನ್ನು ಮುಂದಿನ 14 ದಿನಗಳವರೆಗೆ ಲ್ಯಾಂಡರ್ ಮಾಡ್ಯೂಲ್ ಅನ್ನು ಸಂಪರ್ಕಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಶನಿವಾರ ಹೇಳಿದ್ದಾರೆ.