ನವದೆಹಲಿ: ದೇಶಾದ್ಯಂತ ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ಮೊದಲ ಹಂತದ  ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹವು ಕರ್ನಾಟಕದಲ್ಲಿ ಯಾದಗಿರ್ ಜಿಲ್ಲೆಯಿಂದ ಮಾರ್ಚ್ 14 ಕ್ಕೆ ಪ್ರಾರಂಭವಾಗಲಿದೆ.


COMMERCIAL BREAK
SCROLL TO CONTINUE READING

ಒಟ್ಟು 11 ದಿನಗಳ ನಡೆಯುವ ಈ ರೈತರ ಹೋರಾಟದಲ್ಲಿ ಜೈಕಿಸಾನ್ ಆಂದೋಲನ್, ಕರ್ನಾಟಕ ರಾಜ್ಯ ರೈತ ಸಂಘ, ರೈತು ಜಂಟಿ ಕಾರ್ಯ ಸಮಿತಿ, ಕಿಸಾನ್ ಸಂಘರ್ಷ ಸಮಿತಿ ಹಾಗೂ ಇನ್ನು ಹಲವಾರು ರೈತ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಲಿವೆ ಎಂದು ತಿಳಿದುಬಂದಿದೆ.


ಈ ಸತ್ಯಾಗ್ರಹ ರೂಪುರೇಷೆಗಳ ಕುರಿತಾಗಿ ಪ್ರತಿಕ್ರಯಿಸಿರುವ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ "ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹ  ಪ್ರಮುಖವಾಗಿ ಗಾಂಧೀಜಿಯವರ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡು ಸಿದ್ದಗೊಳಿಸಿದಂತಹ ಹೋರಾಟದ ಮಾದರಿಯಾಗಿದ್ದು. ಈ ಹೋರಾಟದಲ್ಲಿ ಅಧಿಕಾರಿಗಳು ,ಹೋರಾಟಗಾರರು,ಪತ್ರಕರ್ತರಿಗೂ ಕೂಡಾ ಆಹ್ವಾನ ನೀಡಲಾಗಿದೆ" ಎಂದು ತಿಳಿಸಿದ್ದಾರೆ.


ಕರ್ನಾಟಕದ ಯಾದಗೀರ್ ಜಿಲ್ಲೆಯಿಂದ ಆರಂಭವಾಗುವ ಈ ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹವು ಕೃಷಿ ಮಾರುಕಟ್ಟೆಗಳಿಗೆ ಭೇಟಿ ನೀಡಿ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಿ ರೈತರ ಲೂಟಿಯನ್ನು ತಡೆಗಟ್ಟುವ ವಿಚಾರವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.


 ಮೊದಲ ಹಂತದ ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹದ ವಿವರ ಇಂತಿದೆ:
 * ಮಾರ್ಚ್ 13, 2018: - ಯೋಗೇಂದ್ರ ಯಾದವ್ ಮತ್ತು ಪ್ರೊಫೆಸರ್ ಕೋದಂಡರಾಮ್ ರಿಂದ ಹೈದರಾಬಾದ್ ನಲ್ಲಿ ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹದ ಕುರಿತಾಗಿ ಪತ್ರಿಕಾಗೋಷ್ಠಿ 


* ಮಾರ್ಚ್ 14, 2018:  ಯಾದಗೀರ್, ಕರ್ನಾಟಕ


* ಮಾರ್ಚ್ 15, 2018:  ಕರ್ನೂಲ್, ಆಂಧ್ರ


* ಮಾರ್ಚ್ 16, 2018:  ಸೂರ್ಯಪೇಟ್ & ಕೋಡಾದ್, ತೆಲಂಗಾಣ


* ಮಾರ್ಚ್ 18 ಮತ್ತು 19, 2018: ಶ್ರೀ ಗಂಗಾನಗರ್, ರಾಜಸ್ಥಾನ


* ಮಾರ್ಚ್ 20,  2018:  ಅಲ್ವಾರ್, ರಾಜಸ್ಥಾನ


* ಮಾರ್ಚ್ 21, 2018: ರೆವಾರಿ, ಹರಿಯಾಣ


* ಮಾರ್ಚ್ 22   2018:  ನುಹ್, ಹರಿಯಾಣ


* ಮಾರ್ಚ್ 25, 2018:  ರುದ್ರಪುರ, ಉತ್ತರಖಂಡ್


* ಮಾರ್ಚ್ 26, 2018: ಪ್ರತಾಪ್ ಘಡ್, ಉತ್ತರ ಪ್ರದೇಶ


* ಮಾರ್ಚ್ 27 ಮತ್ತು 31,  2018: ಮಧ್ಯಪ್ರದೇಶ(ಸ್ಥಳ ಘೋಷಣೆ ಮಾಡಬೇಕಿದೆ)