ನವದೆಹಲಿ: National Covid-19 Vaccination Program - ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಜೂನ್ 21 ರಿಂದ ದೇಶದ ಪ್ರತಿ ರಾಜ್ಯಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಜೂನ್ 21 ರಿಂದ ರಾಷ್ಟ್ರೀಯ ವ್ಯಾಕ್ಸಿನೆಶನ್ ಕಾರ್ಯಕ್ರಮವನ್ನು (National Vaccination Program) ಜಾರಿಗೆ ತರಲು ಕೇಂದ್ರ ಆರೋಗ್ಯ ಸಚಿವಾಲಯವು (Health Ministry) ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.


COMMERCIAL BREAK
SCROLL TO CONTINUE READING

ಶೇ.75 ರಷ್ಟು ವ್ಯಾಕ್ಸಿನ್ ಗಳನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ನೀಡಲಿದೆ ಕೇಂದ್ರ
ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ (National Vaccination Program) ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರವು ಲಸಿಕೆ ತಯಾರಿಕಾ ಕಂಪನಿಗಳಿಂದ ಶೇ. 75 ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳಿಗೆ 'ಉಚಿತ' ನೀಡಲಿದೆ. ಕೇಂದ್ರ ಸರ್ಕಾರದಿಂದ ಪಡೆದ  ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಆರೋಗ್ಯ ಕೇಂದ್ರಗಳು, ಮುಂಚೂಣಿ ಕೆಲಸಗಾರರು, 45 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಿವೆ.


ವ್ಯಾಕ್ಸಿನೆಶನ್ ಆದ್ಯತೆಯನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಲಿವೆ
ಕೇಂದ್ರ ಆರೋಗ್ಯ ಸಚಿವಾಲಯದ (Health Ministry) ಪರಿಷ್ಕೃತ ಮಾರ್ಗಸೂಚಿಗಳ (Revised Guidelines)ಪ್ರಕಾರ, ವ್ಯಾಕ್ಸಿನೇಷನ್‌ನಲ್ಲಿ ಯಾವ ಗುಂಪಿಗೆ ಮೊದಲು ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರಗಳು ನಿರ್ಧರಿಸಲಿವೆ. ರಾಜ್ಯಗಳಿಗೆ ಎಷ್ಟು ಲಸಿಕೆ ಪ್ರಮಾಣಗಳು ಸಿಗುತ್ತವೆ ಎಂಬುದು ರಾಜ್ಯದ ಜನಸಂಖ್ಯೆ, ಕರೋನಾ ಪ್ರಕರಣಗಳು ಮತ್ತು ಲಸಿಕೆಯ ವ್ಯರ್ಥವ್ಯಯ (Wastage) ಅವಲಂಭಿಸಿರಲಿದೆ.


ಇದನ್ನೂ ಓದಿ-Alert! ದೇಶಕ್ಕೆ ಎಂಟ್ರಿ ಕೊಟ್ಟ Coronavirus ಹೊಸ ರೂಪಾಂತರಿ! ಯಾರಿಗೆ ಹೆಚ್ಚು ಅಪಾಯ?


ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಸರ್ವಿಸ್ ಚಾರ್ಜ್ (Service Charge) ಪಡೆಯುವಂತಿಲ್ಲ
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ಲಸಿಕೆಯ ಒಂದು ಡೋಸ್ ಬೆಲೆಗಿಂತ ಗರಿಷ್ಟ ಅಂದರೆ ರೂ.150 ಮಾತ್ರ ಹೆಚ್ಚುವರಿ ಮೊತ್ತವನ್ನು ಸರ್ವಿಸ್ ಚಾರ್ಜ್  ಪಡೆಯಬೇಕು ಎನ್ನಲಾಗಿದೆ. ಅಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ ಕೋವಿಶೀಲ್ಡ್ (Covishield)ವ್ಯಾಕ್ಸಿನ್ ನ ಗರಿಷ್ಠ ಮೊತ್ತ ರೂ.750 ಆಗಿದ್ದರೆ, ಕೊವ್ಯಾಕ್ಸಿನ್ (Covaxin) ಮೊತ್ತ ಗರಿಷ್ಟ ರೂ.1350 ಆಗಿರಲಿದೆ.


ಇದನ್ನೂ ಓದಿ- China ಅಸಲ್ಲಿಯತ್ತು ಬಹಿರಂಗಪಡಿಸಿದ ಅಮೆರಿಕಾದ ವರದಿ, ಕೊರೊನಾ ವುಹಾನ್ ಲ್ಯಾಬ್ ನಿಂದಲೇ ಸೋರಿಕೆ!


ಆನ್ ಸೈಟ್ ರಿಜಿಸ್ಟ್ರೇಶನ್ (On Site Registration) ಸೌಲಭ್ಯ ನೀಡಬಹುದು
ಸರ್ಕಾರಿ ಹಾಗೂ ಖಾಸಗಿ ವ್ಯಾಕ್ಸಿನೆಶನ್ ಸೆಂಟರ್ ಗಳು ಜನರ ಅನುಕೂಲಕ್ಕಾಗಿ ಅವರಿಗೆ ಆನ್ ಸೈಟ್ ರಿಜಿಸ್ಟ್ರೇಷನ್ ಸೌಲಭ್ಯ (Registration for Corona Vaccine)  ನೀಡಬಹುದಾಗಿದೆ. ಆದರೆ, ಅದರ ವಿಸ್ತೃತ ಪ್ರಕ್ರಿಯೆ ರಾಜ್ಯಸರ್ಕಾರಗಳು ನಿರ್ಧರಿಸಲಿವೆ. ಈ ನೂತನ ಮಾರ್ಗಸೂಚಿಗಳು ಜೂನ್ 21ರಿಂದ ಜಾರಿಯಾಗಲಿವೆ ಹಾಗೂ ಸರ್ಕಾರ (Government Of India) ಕಾಲಕಾಲಕ್ಕೆ ಇವುಗಳ ಪರಿಶೀಲನೆ ನಡೆಸಲಿದೆ.


ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.