ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೇ. ಇಂದು, ಚುನಾವಣಾ ಆಯೋಗವು ಎಲ್ಲಾ ಮೂರು ಪಕ್ಷಗಳ ಬಗ್ಗೆ ತನ್ನ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಚುನಾವಣಾ ಆಯೋಗವು ಮೂರು ಪಕ್ಷಗಳಿಗೆ ಶೋ ಕಾಸ್ ನೋಟಿಸ್ ನೀಡಿತ್ತು ಮತ್ತು ಅವರ ಸಾಧನೆಯ ಆಧಾರದ ಮೇಲೆ ತಮ್ಮ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿತ್ತು.


ಚುನಾವಣಾ ಚಿಹ್ನೆ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಪ್ರಕಾರ, ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯುತ್ತದೆ, ಅದರ ಅಭ್ಯರ್ಥಿಗಳು ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕನಿಷ್ಠ ಆರು ಶೇಕಡಾ ಮತಗಳನ್ನು ಪಡೆದರೆ ಮಾತ್ರ ಈ ಸ್ಥಾನಮಾನ ಸಿಗುತ್ತದೆ. ಒಂದು ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ಪಕ್ಷವು ಲೋಕಸಭೆಯಲ್ಲಿ ಕನಿಷ್ಠ ನಾಲ್ಕು ಸಂಸದರನ್ನು ಹೊಂದಿರಬೇಕು. ಅಲ್ಲದೆ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ ಎರಡು ಪ್ರತಿಶತ ಇರಬೇಕು ಮತ್ತು ಅಂತಹ ಪಕ್ಷದ ಅಭ್ಯರ್ಥಿಗಳು ಕನಿಷ್ಠ ಮೂರು ರಾಜ್ಯಗಳಿಂದ ಆಯ್ಕೆಯಾಗಿ ಬರಬೇಕು.


ಪ್ರಸ್ತುತ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ),  ಕಾಂಗ್ರೆಸ್, ಭಾರತೀಯ ಜನತಾ ಪಕ್ಷ (ಬಿಜೆಪಿ), ಬಿಎಸ್​ಪಿ, ಸಿಪಿಐ, ಸಿಪಿಐ (ಎಂ), ಎನ್‌ಸಿಪಿ ಮತ್ತು ಮೇಘಾಲಯದ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹೊಂದಿವೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಸಿಪಿಐನ ಸಾಧನೆ ಈ ಮಾನದಂಡಕ್ಕೆ ಉತ್ತಮವೆಂದು ಪರಿಗಣಿಸಲಾಗಿಲ್ಲ, ಆದ್ದರಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೊನೆಗೊಳ್ಳುವ ಸಾಧ್ಯತೆಗಳಿವೆ.