ನವದೆಹಲಿ: ರಕ್ಷಾ ಬಂಧನಕ್ಕೆ ಕೆಲವೇ ದಿನಗಳಿರುವಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ರಾಷ್ಟ್ರೀಯ ಶಾಪಿಂಗ್ ಡೇಸ್ ಸೇಲ್ ಆಯೋಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಆಗಸ್ಟ್ 8 ರಿಂದ ಆಗಸ್ಟ್ 10 ರವರೆಗೆ ನಡೆಯಲಿರುವ ಈ ಸೇಲ್ ನಲ್ಲಿ ನೀವು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ವಸ್ತುಗಳ ಖರೀದಿ ಮಾಡಿದರೆ ನಿಮಗೆ ವಿಶೇಷವಾಗಿ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದ್ದು, ಆಗಸ್ಟ್ 7ರ ರಾತ್ರಿ 8 ಗಂಟೆಯಿಂದಲೇ ಅವರಿಗೆ ಮಾರಾಟ ಪ್ರಾರಂಭವಾಗಲಿದೆ.


ರಾಷ್ಟ್ರೀಯ ಶಾಪಿಂಗ್ ದಿನದ ಮಾರಾಟಕ್ಕೆ ಮೊದಲು, ಫ್ಲಿಪ್‌ಕಾರ್ಟ್ ಪೂರ್ವ-ಮಾರಾಟವನ್ನು ಪರಿಚಯಿಸಿದೆ. ಇದರಲ್ಲಿ, ಗ್ರಾಹಕರಿಗೆ ಕೆಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಪಡೆಯಲಿದ್ದಾರೆ. ಸೌಂದರ್ಯ ಉತ್ಪನ್ನಗಳು, ಮನೆ ಮತ್ತು ಪೀಠೋಪಕರಣಗಳು, ಲೈಫ್ ಸ್ಟೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಕಂಪನಿಯು ಹಲವು dealಗಳನ್ನೂ ಘೋಷಿಸಿದೆ. 


ರಾಷ್ಟ್ರೀಯ ರಾಷ್ಟ್ರೀಯ ಶಾಪಿಂಗ್ ದಿನಗಳ ಮಾರಾಟದಡಿಯಲ್ಲಿ, ಟಿವಿ ಮತ್ತು ಉಪಕರಣಗಳಿಗೆ ಮೇಲೆ ಶೇ.75 ರವರೆಗೆ ರಿಯಾಯಿತಿ, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇ.80ರಷ್ಟು ರಿಯಾಯಿತಿ, ಫ್ಯಾಷನ್ ಮತ್ತು ಬಟ್ಟೆಗಳ ಮೇಲೆ ಶೇ.50-80ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸೌಂದರ್ಯ ಮತ್ತು ಬೇಬಿ ಕೇರ್ ಉತ್ಪನ್ನಗಳು 99 ರೂ. ಗಳಿಂದ ಪ್ರಾರಂಭವಾಗುತ್ತವೆ.