ನವದೆಹಲಿ: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಷ್ಟ್ರೀಯತೆ ಎಂದರೆ ಜನರ ಸಮಸ್ಯೆಗಳನ್ನು ಬಗೆ ಹರಿಸುವುದೇ ಹೊರತು ಅವುಗಳನ್ನು ಹತ್ತಿಕ್ಕುವುದಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಅಮೇಥಿಯಲ್ಲಿ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಶೂಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕಾ ಮಾಧ್ಯಮಗಳ ಎದುರಿಗೆ ಇವೆಲ್ಲವನ್ನೂ ಮಾಡುತ್ತಿರುವುದು ತಪ್ಪು ಎಂದರು.



COMMERCIAL BREAK
SCROLL TO CONTINUE READING

"ವಿಷಯಗಳು ಸ್ಪಷ್ಟವಾಗಿವೆ; ಉದ್ಯೋಗ, ಶಿಕ್ಷಣ, ಮಹಿಳೆ ರಕ್ಷಣೆ ,ಮತ್ತು ಆರೋಗ್ಯ. ರಾಷ್ಟ್ರೀಯತೆ ಎಂದರೆ ಜನರ ಸಮಸ್ಯೆಗಳನ್ನು ಪರಿಹರಿಸುವುದು. ಅವರು ಇಲ್ಲಿ ಜನರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇದರ ಬಗ್ಗೆ ಏನಾದರೂ ಧ್ವನಿ ಎತ್ತಿದರೆ ಅವರನ್ನು ಹತ್ತಿಕ್ಕಲಾಗುತ್ತದೆ.ಇದು ಪ್ರಜಾಪ್ರಭುತ್ವವು ಅಲ್ಲ, ಇತ್ತ ಕಡೆ ರಾಷ್ಟ್ರವಾದವು ಅಲ್ಲ "ಎಂದು ಪ್ರಿಯಾಂಕಾ ಬಿಜೆಪಿ ವಿರುದ್ದ ಹರಿಹಾಯ್ದರು.


"ಅವರು ಹಣ, ಸೀರೆ, ಶೂ ಗಳನ್ನು ವಿತರಿಸುವುದರ ಮೂಲಕ ಚುನಾವಣೆಯನ್ನು ಎದುರಿಸುತ್ತಿರುವುದು ತಪ್ಪು...ಅಮೇಥಿಯ ಜನರು ಎಂದಿಗೂ ಕೂಡ ಯಾರನ್ನು ಬೇಡಿಲ್ಲ. ನಾನು ಕಳೆದ 12 ವಯಸ್ಸಿನವಳಾಗಿದ್ದಾಗಿನಿಂದಲೂ ಇಲ್ಲಿಗೆ ನಾನು ಬರುತ್ತಿದ್ದೇನೆ.ಅಮೇಥಿ ಮತ್ತು ರಾಯಬರೇಲಿ ಜನಕ್ಕೆ ಹೆಮ್ಮೆ ಇದೆ ಎಂದು ಪ್ರಿಯಾಂಕಾ ಹೇಳಿದರು.