ನವದೆಹಲಿ: ಇಂದು ಬೆಳಿಗ್ಗೆ 10:30ಕ್ಕೆ ಮಹತ್ವದ ಅಯೋಧ್ಯೆ ವಿವಾದದ ತೀರ್ಪು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಮ ದೇವಾಲಯದ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಇತ್ತೀಚೆಗೆ, ಇಡೀ ದೆಹಲಿ ಪೊಲೀಸರಿಗೆ ವೈರ್‌ಲೆಸ್‌ನಿಂದ ಸಂದೇಶ ನೀಡಲಾಗಿದ್ದು, ರಜೆಯಲ್ಲಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಂದೇಶ ರವಾನಿಸಲಾಗಿದೆ. ಅದರೊಂದಿಗೆ, ಎಲ್ಲಾ SHOಗಳಿಗೆ ಈ ಪ್ರದೇಶದ ಎಲ್ಲಾ ಧಾರ್ಮಿಕ ಸ್ಥಳಗಳ ಮೇಲೆ ನಿಗಾ ಇಡಲು ತಿಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರವು ನಾಲ್ಕು ಸಾವಿರ ಅರೆಸೈನಿಕ ಪಡೆಗಳನ್ನು ಕಳುಹಿಸಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯವು 40 ಕಂಪನಿಗಳನ್ನು ಹೆಚ್ಚುವರಿ ಭದ್ರತಾ ಪಡೆ ಉತ್ತರ ಪ್ರದೇಶಕ್ಕೆ ನಿಯೋಜಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಉತ್ತರ ಪ್ರದೇಶದ ಸೂಕ್ಷ್ಮ ಜಿಲ್ಲೆಗಳಾದ ಲಕ್ನೋ, ವಾರಣಾಸಿ, ಕಾನ್ಪುರ್, ಅಲಿಗಢ, ಬರೇಲಿ, ಮೊರಾದಾಬಾದ್, ರಾಂಪುರ್ ಇತ್ಯಾದಿಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.


ಸರ್ಕಾರದ ಸೂಚನೆಯ ಮೇರೆಗೆ ಆಯುಕ್ತರು ಮತ್ತು ಡಿಐಜಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಶಿಬಿರಗಳನ್ನು ನಡೆಸಲು ತಿಳಿಸಲಾಗಿದೆ. ಅಯೋಧ್ಯೆಗೆ ಹೋಗುವ ಮಾರ್ಗಗಳಿಗೆ ಮೊಹರು ಹಾಕಲಾಗಿದೆ. 


ಅಯೋಧ್ಯೆ ತೀರ್ಪು ಸೋಲೂ ಅಲ್ಲ, ಗೆಲುವೂ ಅಲ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿ
ಅಯೋಧ್ಯೆಯ ತೀರ್ಪಿಗೂ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸದ್ಭಾವನೆಯ ಶ್ರೇಷ್ಠ ಸಂಪ್ರದಾಯವನ್ನು ಬಲಪಡಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, "ಅಯೋಧ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಯಾರೊಬ್ಬರ ಗೆಲುವು ಅಥವಾ ಸೋಲು ಆಗುವುದಿಲ್ಲ. ನಾವೆಲ್ಲರೂ ಈ ನಿರ್ಧಾರವನ್ನು ಭಾರತದ ಶಾಂತಿ, ಐಕ್ಯತೆಗೆ ಆದ್ಯತೆ ನೀಡಬೇಕು. ಸದ್ಭಾವನೆಯ ದೊಡ್ಡ ಸಂಪ್ರದಾಯವನ್ನು ಬಲಪಡಿಸಿ. ಇದು ದೇಶದ ಜನತೆಯಲ್ಲಿ ನನ್ನ ಮನವಿ" ಎಂದು ತಿಳಿಸಿದರು.


ಅಯೋಧ್ಯೆ ನಗರದಲ್ಲಿ ಭದ್ರತಾ ವ್ಯವಸ್ಥೆ:
ಅಯೋಧ್ಯೆ ವಿವಾದದ ತೀರ್ಪು ಮತ್ತು ಭದ್ರತೆಯ ದೃಷ್ಟಿಯಿಂದ, ಅಯೋಧ್ಯೆ ನಗರದಲ್ಲಿ ಭಾರೀ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ನಿರಂತರವಾಗಿ ತನಿಖೆ ನಡೆಸಲಾಗುತ್ತಿದೆ. ಅಯೋಧ್ಯೆಯ ನಿರ್ಧಾರ ಮತ್ತು ಭಯೋತ್ಪಾದಕ ಪಿತೂರಿಯಿಂದಾಗಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ಗಳು ಮತ್ತು ಧರ್ಮಶಾಲಾಗಳಲ್ಲಿರುವ ಜನರ ವಿಳಾಸಗಳು ಮತ್ತು ಗುರುತುಗಳನ್ನು ಪರಿಶೀಲಿಸಲಾಗುತ್ತಿದೆ.


ಅಲ್ಲದೆ, ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಆದೇಶ ನೀಡಲಾಗಿದೆ. ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಮೊದಲು ಅಯೋಧ್ಯೆಯಲ್ಲಿ ಭಯೋತ್ಪಾದಕ ಪಿತೂರಿ ಬಹಿರಂಗವಾಗಿದೆ. ಗುಪ್ತಚರ ಸಂಸ್ಥೆಗಳು ಅಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿಯ ಭೀತಿಯನ್ನು ವ್ಯಕ್ತಪಡಿಸಿದ್ದು, ಯುಪಿ ಎಟಿಎಸ್ ಅನ್ನು ಹೆಚ್ಚಿನ ಎಚ್ಚರವಾಗಿರಿಸಿದೆ. ಅದೇ ಸಮಯದಲ್ಲಿ, ಇಂಡೋ-ನೇಪಾಳ ಗಡಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ.


ಎಲ್ಲಾ ರಾಜ್ಯಗಳಿಗೂ ಬಿಗಿ ಭದ್ರತೆ ಕೈಗೊಳ್ಳುವಂತೆ ಗೃಹ ಸಚಿವಾಲಯದ ಎಚ್ಚರಿಕೆ:
ಅಯೋಧ್ಯೆ ಪ್ರಕರಣದ ತೀರ್ಮಾನಕ್ಕೆ ಸಂಬಂಧಿಸಿದಂತೆ ಗುರುವಾರ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದರು. ಸಿಎಂ ಯೋಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾನೂನು ಸುವ್ಯವಸ್ಥೆ ಕುರಿತು ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದರು. ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಮೊದಲು ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.


ಭದ್ರತಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ಮನವಿ ಮಾಡಿದೆ. ಅಲ್ಲದೆ, ಅಯೋಧ್ಯೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 40 ಸಾವಿರ ಹೆಚ್ಚುವರಿ ಸೈನಿಕರನ್ನು ರವಾನಿಸಲಾಗಿದೆ. ಅಯೋಧ್ಯೆ ವಿವಾದದ ಬಗ್ಗೆ ಇನ್ನೊಂದು ವಾರದಲ್ಲಿ ತೀರ್ಪು ಹೊರಬರುವ ನಿರೀಕ್ಷೆ ಇದ್ದಿದ್ದರಿಂದ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಯೋಧ್ಯೆಯಲ್ಲಿ 10 ತಾತ್ಕಾಲಿಕ ಜೈಲುಗಳನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ಜೈಲು ನಿರ್ಮಿಸಲು ವಿವಿಧ ಪ್ರದೇಶಗಳಲ್ಲಿ ಎಂಟು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.