ನವದೆಹಲಿ: 2019ರ ಲೋಕಸಭೆ ಚುನಾವಣೆಯ ಮತಎಣಿಕೆ ಪ್ರವೃತ್ತಿ ಪ್ರಗತಿಯಲ್ಲಿದೆ. ಎನ್​ಡಿಎ ಮತ್ತೆ ಕೇಂದ್ರ ಸರ್ಕಾರದಲ್ಲಿ ತನ್ನ ಅಧಿಕಾರ ಸ್ಥಾಪಿಸಲಿದೆ. ಅದೇ ಸಮಯದಲ್ಲಿ, ಒಡಿಶಾದಲ್ಲಿನ ವಿಧಾನಸಭಾ ಚುನಾವಣೆಗಳ ಟ್ರೆಂಡಿಂಗ್ ಹೊರಬಂದಿದ್ದು, ನವೀನ್ ಪಟ್ನಾಯಕ್ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಒಡಿಶಾದಲ್ಲಿ 147 ವಿಧಾನಸಭೆ ಸ್ಥಾನಗಳಿವೆ. ಆರಂಭಿಕ ಪ್ರವೃತ್ತಿಗಳಲ್ಲಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ಮುನ್ನಡೆ ಕಾಯ್ದುಕೊಂಡಿದೆ. 2014 ರ ಚುನಾವಣೆಯಲ್ಲಿ ಬಿಜು ಜನತಾ ದಳವು 117 ಸ್ಥಾನಗಳನ್ನು ಗೆದ್ದುಕೊಂಡಿತು.


ಬಿಜು ಜನತಾ ದಳದ ಟ್ರೆಂಡಿಂಗ್ ಗಮನಿಸುತ್ತಿದ್ದರೆ ಬಿಜೆಡಿ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ನವೀನ್ ಪಟ್ನಾಯಕ್ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ. ಆದಾಗ್ಯೂ, 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. 


ಗಮನಾರ್ಹವಾಗಿ, ನವೀನ್ ಪಟ್ನಾಯಕ್ ಕಳೆದ 20 ವರ್ಷಗಳಿಂದ ಒಡಿಶಾದ ಗದ್ದುಗೆ ಹಿಡಿದಿದ್ದಾರೆ.