ಒಡಿಸ್ಸಾದಲ್ಲಿ ದಾಖಲೆಯ ಐದನೇ ಬಾರಿ ಅಧಿಕಾರದತ್ತ ನವೀನ್ ಪಟ್ನಾಯಕ್
ಒಡಿಸ್ಸಾ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ದಾಖಲೆ ಐದನೇ ಬಾರಿಗೆ ಅಧಿಕಾರದತ್ತ ನವೀನ್ ಪಟ್ನಾಯಕ್ ಸಾಗಿದ್ದಾರೆ.
ನವದೆಹಲಿ: ಒಡಿಸ್ಸಾ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ದಾಖಲೆ ಐದನೇ ಬಾರಿಗೆ ಅಧಿಕಾರದತ್ತ ನವೀನ್ ಪಟ್ನಾಯಕ್ ಸಾಗಿದ್ದಾರೆ.
147 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಡಿ, ಸದ್ಯ 93 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.ಇನ್ನೊಂದೆಡೆ ಬಿಜೆಪಿ 27 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಪ್ರಮುಖ ವಿರೋಧ ಪಕ್ಷವಾಗುವತ್ತ ಧಾಪುಗಾಲು ಹಾಕಿದೆ. ಇನ್ನೊಂದೆಡೆ 18 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆ ಸಾಧಿಸಿದೆ.
2000 ನೇ ಇಸವಿಯಿಂದಲೂ ಅಧಿಕಾರದಲ್ಲಿರುವ ನವೀನ್ ಪಟ್ನಾಯಕ್. ದೀರ್ಘ ಅವಧಿವರೆಗೆ ಅಧಿಕಾರದಲ್ಲಿದ್ದ ಎರಡನೇ ಸಿಎಂ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಈ ಬಾರಿ ವಿಧಾನಸಭೆಯಲ್ಲಿ ಬಿಜೆಪುರ್ ಹಾಗೂ ಹಿಂಜಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.