ನವೀ ಮುಂಬೈ: ವೇಗವಾಗಿ ಬಂದ ಕಾರಿಗೆ ಇಬ್ಬರು ಬಲಿ, ಚಾಲಕನಿಗಾಗಿ ಪೊಲೀಸರ ಹುಡುಕಾಟ
ಅಪಘಾತ ಸಂಭವಿಸಿದ ವೇಳೆ ಸ್ಥಳೀಯರು ಕಾರು ಚಾಲಕನನ್ನು ಹಿಡಿಯಲು ಯತ್ನಿಸಿದ್ದು, ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದು, ಅಪರಾಧಿಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ನವೀ ಮುಂಬೈ: ಮಹಾರಾಷ್ಟ್ರದ ನವೀ ಮುಂಬೈಯ ಕಾಮೋಥೆ ಪ್ರದೇಶದಲ್ಲಿ ಅತಿವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ 7.30 ರ ಸುಮಾರಿಗೆ ವೇಗವಾಗಿ ಬಂದ ಸ್ಕೋಡಾ ಕಾರು ಈ ದುರ್ಘಟನೆಗೆ ಕಾರಣವಾಗಿದೆ.
ಕಾಮೋಥೆ ಪ್ರದೇಶದ ಸೆಕ್ಟರ್ 6 ರಲ್ಲಿ, ವೇಗವಾಗಿ ಚಲಿಸುತ್ತಿದ್ದ ಕಾರು ಸರೋವರ್ ಹೋಟೆಲ್ ಮುಂದೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಮೊದಲು ದ್ವಿಚಕ್ರ ವಾಹನವನ್ನು ಹೊಡೆದಿದೆ, ಅದರ ನಂತರ ಅದು ನಾಲ್ವರ ಮೇಲೆ ಹರಿದಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ವೇಳೆ ಸ್ಥಳೀಯರು ಕಾರು ಚಾಲಕನನ್ನು ಹಿಡಿಯಲು ಯತ್ನಿಸಿದ್ದು, ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದು, ಅಪರಾಧಿಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಮೃತರನ್ನು 7 ವರ್ಷದ ಸರ್ತಕ್ ಚೋಪಡೆ ಮತ್ತು 32 ವರ್ಷದ ವೈಭವ್ ಗುರವ್ ಎಂದು ಗುರುತಿಸಲಾಗಿದೆ.
ಕಾರು ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದ್ದು, ಕಾರು ಏಳು ಮೋಟಾರ್ ಸೈಕಲ್ಗಳು ಮತ್ತು ಶಾಲಾ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೇಗವಾಗಿ ಬಂದ ಕಾರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ಹರಿದಿದ್ದು, ಹಲವಾರು ಬೈಕುಗಳಿಗೂ ಡಿಕ್ಕಿ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳುಗಳನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.