ನವದೆಹಲಿ: ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗಿನ ಜಗಳದ ನಡುವೆ ಈಗ ನವಜೋತ್ ಸಿಂಗ್ ಸಿಧು ಪಂಜಾಬ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಜುಲೈ 14 ರಂದು ಸಿಧು ಅವರು ತಮ್ಮ ರಾಜೀನಾಮೆಯ ಪ್ರತಿಯನ್ನು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದು, ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 2019 ರ ಜೂನ್ 10 ರಂದು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಸಿಧು ಮಂತ್ರಿ ಸ್ಥಾನ ತೊರೆಯಲು ಯಾವುದೇ ಕಾರಣವನ್ನು ತಿಳಿಸಿಲ್ಲ.



'ನಾನು ಈ ಮೂಲಕ  ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಸಿಧು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ನನ್ನ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಕಳುಹಿಸಲಾಗುವುದು ಎಂದು ಅವರು ಹೇಳಿದರು.ಜೂನ್ 6 ರಂದು ನಡೆದ ಕ್ಯಾಬಿನೆಟ್ ಪುನರ್ರಚನೆಯ ನಂತರ ಖಾತೆಯಲ್ಲಿ ಬದಲಾವಣೆ ಮಾಡಿದ ಹಿನ್ನಲೆಯಲ್ಲಿ ಸಿಧು ಸಚಿವ ಸಂಪುಟದಿಂದ ಹೊರಬರಲು ನಿರ್ಧರಿಸಿದರು ಎನ್ನಲಾಗಿದೆ. ಸಿಎಂ ಅಮರಿಂದರ್ ಮತ್ತುಸಿಧು ಅವರ ನಡುವೆ  2019 ರ ಲೋಕಸಭಾ ಚುನಾವಣೆಯ ನಂತರ ಭಿನ್ನಾಭಿಪ್ರಾಯ ಮೂಡಿದೆ. 


ಲೋಕಸಭಾ ಚುನಾವಣೆಯಲ್ಲಿ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರಿಗೆ ಚಂಡೀಗಡದಿಂದ ಸ್ಪರ್ಧಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ ಸಿಧು ಅವರು ಸಿಎಂ ಮೇಲೆ ಅಸಮಾಧಾನಗೊಂಡಿದ್ದರು.