ಚಂಡೀಗಢ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

"ನಾನು ನನ್ನ ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದೇನೆ ಮತ್ತು ಹೊಸ ಅಡ್ವೊಕೇಟ್ ಜನರಲ್ ನೇಮಕ ಮತ್ತು ಹೊಸ ಸಮಿತಿ ಬರುವ ದಿನ ನಾನು ನನ್ನ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ.ಇದು ಯಾವುದೇ ವೈಯಕ್ತಿಕ ಅಹಂ ಅಲ್ಲ" ಎಂದು ಸಿಧು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.


ಇದನ್ನೂ ಓದಿ: Punjab Congress Crisis: ರಾಹುಲ್ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು


ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಿದ್ದು ಹೇಳಿದ್ದಾರೆ. "ವೈಯಕ್ತಿಕವಾಗಿ ಏನೂ ಇಲ್ಲ. ರಾಜ್ಯಕ್ಕಾಗಿ ನಾನು ಅವರ ಜೊತೆ ಮಾತನಾಡುತ್ತೇನೆ.ರಾಜ್ಯಕ್ಕಾಗಿ ಮಾಡಬಹುದಾದ ಎಲ್ಲ ಒಳ್ಳೆಯ ಕೆಲಸಕ್ಕಾಗಿ ನಾನು ಅವರೊಂದಿಗೆ ಮಾತನಾಡುತ್ತೇನೆ. ಚರಂಜಿತ್ ಚನ್ನಿ ಅವರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾನು ಏನು ಮಾಡಿದರೂ ಪಂಜಾಬ್‌ಗಾಗಿ. ಪಂಜಾಬ್ ನನ್ನ ಆತ್ಮ, ಅದು ಗುರಿಯಾಗಿದೆ,ಎಂದು ಸಿಧು ಸುದ್ದಿಗಾರರಿಗೆ ತಿಳಿಸಿದರು. ಸೆಪ್ಟೆಂಬರ್ 28 ರಂದು, ಸಿಧು (Navjot Singh Sidhu) ಅವರು ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಪಂಜಾಬ್‌ನಲ್ಲಿ ಕ್ಯಾಬಿನೆಟ್ ವಿಸ್ತರಣೆಯ ನಂತರ ಅಧಿಕಾರಶಾಹಿ ವ್ಯವಸ್ಥೆ ಮತ್ತು ಅವರ ಆಜ್ಞೆಗಳನ್ನು ಅನುಸರಿಸದಿರುವ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿತ್ತು.ಈ ವರ್ಷ ಜುಲೈ 23 ರಂದು ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಗೊಂದಲದ ನಂತರ ಅವರನ್ನು ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.


ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಗೆ ಔತಣಕೂಟಕ್ಕೆ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಸಿಎಂ ಅಮರಿಂದರ್ ಸಿಂಗ್ ...!


ಪಂಜಾಬ್ ಕಾಂಗ್ರೆಸ್‌ನಲ್ಲಿ ಸಿಧು ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಜಗಳ ಆಗಸ್ಟ್‌ನಲ್ಲಿ ಉಲ್ಬಣಗೊಂಡ ನಂತರ, ಪಕ್ಷವು ಆಗಿನ ಮುಖ್ಯಮಂತ್ರಿಯ ಇಚ್ಛೆಗೆ ವಿರುದ್ಧವಾಗಿ ಸಿಧು ಅವರನ್ನು ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಅಮರಿಂದರ್ ಸಿಂಗ್ ಅವರು ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು ಇತ್ತೀಚೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು, ಅದನ್ನು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಸಹ ಅಂಗೀಕರಿಸಿದ್ದಾರೆ.


ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಈಗ ‘ಪಂಜಾಬ್ ಲೋಕ ಕಾಂಗ್ರೆಸ್’ ಎಂಬ ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದಾರೆ.


ಇದನ್ನೂ ಓದಿ-Corona Vaccine: ಈ ಲಸಿಕೆಯಿಂದ ಎಚ್‌ಐವಿ ಅಪಾಯವಿದೆಯೇ? ದಕ್ಷಿಣ ಆಫ್ರಿಕಾದ ನಂತರ, ನಮೀಬಿಯಾದಲ್ಲಿ ಲಸಿಕೆ ನಿಷೇಧ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ