ಬಿಹಾರ: ಡೈನಾಮೈಟ್ ಬಳಸಿ ಬಿಜೆಪಿ ನಾಯಕನ ಮನೆ ಸ್ಪೋಟಿಸಿದ ನಕ್ಸಲರು
ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಮನೆಯ ಮೇಲೆ ಪೋಸ್ಟರ್ ಹಾಕಲಾಗಿದೆ.
ಗಯಾ: ಬಿಹಾರದಲ್ಲಿ, ನಕ್ಸಲರ ಅಟ್ಟಹಾಸ ಮುಂದುವರೆದಿದ್ದು, ಗಯಾದಲ್ಲಿ ಎಂಎಲ್ ಸಿ ಮತ್ತು ಬಿಜೆಪಿಯ ನಾಯಕ ಅನುಜ್ ಕುಮಾರ್ ಸಿಂಗ್ ಅವರ ಮನೆ ಮೇಲೆ ನಕ್ಸಲರು ಬುಧವಾರ ರಾತ್ರಿ ಡೈನಮೈಟ್ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಮಾಹಿತಿಗಳಿಲ್ಲ.
ನಕ್ಸಲರು ಡೈನಮೈಟ್ ಬಳಸಿ ಬಿಜೆಪಿ ನಾಯಕನ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕರಿಸಬೇಕೆಂದು ಒತ್ತಾಯಿಸಿದ ಸ್ಫೋಟದ ನಂತರ ನಕ್ಸಲರು ಮನೆಯ ಮೇಲೆ ಭಿತ್ತಿಪತ್ರವೊಂದನ್ನು ಹಾಕಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಿಜೆಪಿ ನಾಯಕ ಅನುಜ್ ಕುಮಾರ್ ಸಿಂಗ ಅವರ ಮನೆಯನ್ನು ಸ್ಫೋಟಿಸಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಗಯಾದ ದುಮರಿಯಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಹಲವು ಬಾರಿ ಬಿಜೆಪಿ ನಾಯಕ ಅನುಜ್ ಕುಮಾರ್ ಸಿಂಗ್ ಅವರಿಗೆ ನಕ್ಸಲರಿಂದ ಬೆದರಿಕೆ ಹಾಕಲಾಗಿದೆ ಎಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ.
ಈ ಘಟನೆಯ ನಂತರ ಇಡೀ ಗ್ರಾಮದಲ್ಲಿ ಗಾಬರಿ ವಾತಾವರಣ ನಿರ್ಮಾಣವಾಗಿದ್ದು, ಈ ಪ್ರದೇಶದಲ್ಲಿ ನಕ್ಸಲರ ಉಪಸ್ಥಿತಿಯು ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ.
ವಾಸ್ತವವಾಗಿ, ಗಯಾ ಜಿಲ್ಲೆಯ ಹೆಚ್ಚಿನ ಭಾಗಗಳು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಚುನಾವಣಾ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.