ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ಇದೀಗ ಗಡಿ ಮತ್ತು ಕರಾವಳಿ ಪ್ರದೇಶಗಳಿಗೂ ಸೇವೆ ಸಲ್ಲಿಸಲಿದೆ. ಎನ್‌ಸಿಸಿ ವಿಸ್ತರಣೆಗೆ ಸಂಬಂಧಿಸಿದ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Deffence Minister Rajnath Singh) ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ದೇಶದ ಎಲ್ಲಾ 173 ಗಡಿ ಮತ್ತು ಕರಾವಳಿ ಜಿಲ್ಲೆಗಳ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 'ಹರ್ ಕಾಮ ದೇಶ ದೇಶ ಕಾ ನಾಮ್' ಕುರಿತು ಮಾತನಾಡುತ್ತಾ, ಯುವ ಶಕ್ತಿಯನ್ನು ದೇಶ ಸೇವೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಜೋಡಿಸುವ ಬಗ್ಗೆ ಪ್ರಸ್ತಾಪಿಸಿದ್ದರು.


COMMERCIAL BREAK
SCROLL TO CONTINUE READING

ದೇಶ ಸೇವೆಯಲ್ಲಿ ತೊಡಗಲಿದೆ ಯುವಶಕ್ತಿ
ದೇಶದ ಸುಮಾರು 173 ಗಡಿ ಮತ್ತು ಕರಾವಳಿ ಪ್ರದೇಶಗಳಿಂದ ಎನ್‌ಸಿಸಿಗೆ ಸುಮಾರು 1 ಲಕ್ಷ ಹೊಸ ಕೆಡೆಟ್‌ಗಳನ್ನು ನೇಮಕ ಮಾಡಲಾಗುವುದು, ಅದರಲ್ಲಿ ಮೂರನೇ ಒಂದು ಭಾಗದಷ್ಟು ಬಾಲಕಿಯರು ಇರಲಿದ್ದಾರೆ. ಈ ಯೋಜನೆಯಡಿ 1 ಸಾವಿರಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳನ್ನು ಗುರುತಿಸಲಾಗಿದ್ದು, ಸರ್ಕಾರದ ಅನುಮೋದನೆ ಪಡೆದ ನಂತರ, ಈ ಯೋಜನೆಯಡಿ ಒಟ್ಟು 83 ಎನ್‌ಸಿಸಿ ಘಟಕಗಳನ್ನು ನವೀಕರಿಸಲಾಗುತ್ತಿದೆ.


ಭಾರತೀಯ ಸೇನೆಯ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 83 ಘಟಕಗಳಲ್ಲಿ, ಸೇನಾಪಡೆಯ 53, ನೌಕಾಪಡೆಯ 20 ಮತ್ತು ವಾಯುಪಡೆಯ 10 ಘಟಕಗಳನ್ನು ನಿಯೋಜಿಸಲಾಗಿದೆ.


ಎನ್‌ಸಿಸಿಯ ವಿಸ್ತರಣೆಯ ಈ ಯೋಜನೆಯನ್ನು ರಾಜ್ಯಗಳ ಸಹಕಾರದೊಂದಿಗೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ದೇಶದ ಯುವ ಜನರಿಗೆ ಸೈನ್ಯದಲ್ಲಿ ಕೆಲಸ ಮಾಡಲು ಪ್ರೇರಣೆ ಸಿಗಲಿದೆ ಎಂಬುದು ಸರ್ಕಾರದ ನಂಬಿಕೆ , ಇದೇ ವೇಳೆ ಸರ್ಕಾರದ ನಿರ್ಧಾರದ ಅನುಷ್ಠಾನವು ಗಡಿಯಲ್ಲಿ ಬೆಳೆಯುವ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ.