ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ರಾಜಕೀಯ ಮಹಾಭಾರತ ಮುಂದುವರೆದಿದೆ. ಪ್ರತಿಯೊಂದು ಪಕ್ಷವೂ ತನ್ನದೇ ಆದ ಗೆಲುವು ಸಾಧಿಸುತ್ತಿದೆ. ಅಜಿತ್ ಪವಾರ್(Ajit Pawar) ಅವರ ಬಳಿ ಈಗ ಕೇವಲ ಒಬ್ಬ ಶಾಸಕರು ಮಾತ್ರ ಇದ್ದಾರೆ, ಉಳಿದ 52 ಮಂದಿ ಶಾಸಕರು ತಮ್ಮ ಬಳಿಯೇ ಇದ್ದಾರೆ ಎಂದು ಎನ್‌ಸಿಪಿ(NCP) ಹೇಳಿಕೊಂಡಿದೆ. 


COMMERCIAL BREAK
SCROLL TO CONTINUE READING

ಅಜಿತ್ ಪವಾರ್ ಅವರೊಂದಿಗೆ ಶಾಸಕ ಅಣ್ಣಾ ಬನಸೋಧಾ ಮಾತ್ರ ಇದ್ದಾರೆ ಎಂದು ಹೇಳಲಾಗುತ್ತಿದೆ. ಅಜಿತ್ ಪವಾರ್ ಅವರೊಂದಿಗೆ ಹೋದ ಇನ್ನೂ ಮೂವರು ಶಾಸಕರು ಹಿಂದಿರುಗುತ್ತಿದ್ದಾರೆ ಎಂದು ಎನ್‌ಸಿಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಮತ್ತೊಂದೆಡೆ, ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ತಮ್ಮ ಶಾಸಕರಿಗೆ ಹೋಟೆಲ್‌ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದು, ಇದರಿಂದಾಗಿ ಬಿಜೆಪಿ ಮತ್ತು ಎನ್‌ಸಿಪಿಯ ಬಂಡಾಯ ಶಾಸಕರ ಗುಂಪು ತಮ್ಮ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ ಎಂದು ತಿಳಿಸಿವೆ. ಶಿವಸೇನೆ ತನ್ನ ಶಾಸಕರನ್ನು ಹೋಟೆಲ್ ಲಲಿತ್‌ನಲ್ಲಿ, ಕಾಂಗ್ರೆಸ್ ಶಾಸಕರನ್ನು ಜೆಡಬ್ಲ್ಯೂ ಮ್ಯಾರಿಯಟ್‌ನಲ್ಲಿ ಮತ್ತು ಎನ್‌ಸಿಪಿ ಶಾಸಕರನ್ನು ನವೋದಯದಲ್ಲಿ ಇರಿಸಲಾಗಿದೆ.


ಶರದ್ ಪವಾರ್(Sharad Pawar) ಟ್ವೀಟ್ ಮಾಡಿದ್ದು, ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ. ಸರ್ವಾನುಮತದಿಂದ ಸರ್ಕಾರ ರಚಿಸಲು ಶಿವಸೇನೆ ಜೊತೆ ಒಗ್ಗೂಡಿಸಲು ಎನ್‌ಸಿಪಿ ನಿರ್ಧರಿಸಿದೆ. ಅಜಿತ್ ಪವಾರ್ ಅವರ ಹೇಳಿಕೆ ಸುಳ್ಳು ಮತ್ತು ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ" ಎಂದು ಅವರು ಬರೆದಿದ್ದಾರೆ.