ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಜೊತೆಗೆ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಸಹ ಮುಂದುವರೆದಿದೆ. 2019 ರ ಲೋಕಸಭಾ ಚುನಾವಣೆಗೆ ಮೊದಲು ಮಹಾರಾಷ್ಟ್ರದ ಕಾಂಗ್ರೆಸ್-ಎನ್ಸಿಪಿ ಮೈತ್ರಿಗೆ ಮತ್ತೊಂದು ಆಘಾತ ಉಂಟಾಗಿದೆ. 


COMMERCIAL BREAK
SCROLL TO CONTINUE READING

ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಿಜೆಪಿ ಪಾಲಾದ ಬೆನ್ನಲ್ಲೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಹಿರಿಯ ಮುಖಂಡ ವಿಜಯ್ ಸಿಂಗ್ ಮೋಹಿತೆ ಪಾಟೀಲ್ ಅವರ ಪುತ್ರ ರಂಜಿತ್ ಸಿಂಗ್ ಬಿಜೆಪಿ ಸೇರಿದ್ದಾರೆ.


ವಾಸ್ತವವಾಗಿ, ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ವಿಜಯ್ ಸಿಂಗ್ ಮೋಹಿತ್ ಪಾಟೀಲ್ ತಮ್ಮ ಪುತ್ರ ನಿಗಾಗಿ ಅಹಮದ್ ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೋರಿದ್ದರು. ಅದನ್ನು ಎನ್ ಸಿಪಿ ತಿರಸ್ಕರಿಸಿತು. 


ಪ್ರಸ್ತುತ ಪಶ್ಚಿಮ ಮಹಾರಾಷ್ಟ್ರದ ಮಾಧಾ ಕ್ಷೇತ್ರದ ಎನ್ ಸಿಪಿ ಸಂಸದರಾಗಿರುವ ವಿಜಯ್ ಸಿಂಗ್ ಮೋಹಿತೆ ಪಾಟೀಲ್, ತಮ್ಮ ಪುತ್ರ ರಣಜೀತ್ ಸಿಂಗ್ ಅವರ ಬಿಜೆಪಿ ಸೇರ್ಪಡೆ ನಿರ್ಧಾರಕ್ಕೆ ತಮ್ಮ ಸಮ್ಮತವಿದೆ ಎಂದು ಹೇಳಿದ್ದಾರೆ.