ಲೋಕಸಭಾ ಚುನಾವಣೆ 2019: NCP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಬಾರಾಮತಿಯಿಂದ ಸುಪ್ರಿಯಾ ಸುಲೇ ಸ್ಪರ್ಧೆ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೇ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆ ಪ್ರಕಟವಾದ ಬೆನ್ನಲ್ಲೇ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಲಕ್ಷದ್ವೀಪದ ಏಕಮಾತ್ರ ಕ್ಷೇತ್ರಕ್ಕೆ ಹಾಗೂ ಮಹಾರಾಷ್ಟ್ರದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
'ಲೋಕ' ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್ 11 ರಿಂದ ಚುನಾವಣೆ ಆರಂಭ, ಮೇ 23ಕ್ಕೆ ಫಲಿತಾಂಶ
ಅದರಂತೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೇ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2009ರಲ್ಲಿ ಇದೇ ಕ್ಷೇತ್ರವನ್ನು ಸುಪ್ರಿಯಾ ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ 1991ರ ಉಪ ಚುನಾವಣೆಯಿಂದ 2009ರ ವರೆಗೆ ಶರದ್ ಪವಾರ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಲೋಕಸಭಾ ಚುನಾವಣೆಗೆ ಎನ್ಸಿಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿ
ಸುಪ್ರಿಯಾ ಸುಲೇ: ಬರಾಮಾತಿ, ಮಹಾರಾಷ್ಟ್ರ
ಸುನಿಲ್ ತಟ್ಕರೆ: ರಾಯ್ಗಡ್, ಮಹಾರಾಷ್ಟ್ರ
ಉದಯರಾಜ್ ಭೋಸ್ಲೇ: ಸತಾರಾ, ಮಹಾರಾಷ್ಟ್ರ
ಧನಂಜಯ್ ಮಹ್ದಿಕ್: ಕೊಲ್ಹಾಪುರ, ಮಹಾರಾಷ್ಟ್ರ
ರಾಜೇಂದ್ರ ಶಿಂಗೆನ್: ಬುಲ್ಡಾನಾ, ಮಹಾರಾಷ್ಟ್ರ
ಗುಲಾಬ್ ರಾವ್ ದಿಯೋಕರ್: ಜಲ್ಗಾನ್, ಮಹಾರಾಷ್ಟ್ರ
ರಾಜೇಶ್ ವೇತೇಕರ್: ಪ್ರಭಾನಿ, ಮಹಾರಾಷ್ಟ್ರ
ಸಂಜಯ್ ದಿನ ಪಾಟೀಲ್: ಮುಂಬೈ ನಾರ್ತ್ ಈಸ್ಟ್, ಮಹಾರಾಷ್ಟ್ರ
ಆನಂದ್ ಪರಂಜಪೆ: ಥಾಣೆ, ಮಹಾರಾಷ್ಟ್ರ
ಬಾಬಾಜಿ ಬಲರಾಮ್ ಪಾಟೀಲ್: ಕಲ್ಯಾಣ್, ಮಹಾರಾಷ್ಟ್ರ
ರಾಜು ಶೆಟ್ಟಿ: ಹಾಟ್ಕಾಂಗಲ್, ಮಹಾರಾಷ್ಟ್ರ
ಮೊಹಮ್ಮದ್. ಪಿಪಿ ಫಿಜ್ಜೆಲ್: ಲಕ್ಷದ್ವೀಪ
14 ಚುನಾವಣೆ ಎದುರಿಸಿರುವ ಶರದ್ ಪವಾರ್, ಈ ಬಾರಿ ಸ್ಪರ್ಧಿಸುವುದಿಲ್ಲವಂತೆ!
ಸೋಮವಾರವಷ್ಟೇ ತಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದರು. ಅಲ್ಲದೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೆ, ರಾಜ್ಯ ಮಟ್ಟದಲ್ಲಿಯೂ ಸಹ ಒಂದೇ ರೀತಿಯ ರಾಜಕೀಯ ಸಿದ್ಧಾಂತ ಹೊಂದಿರುವ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಒಂದಾಗಬೇಕು ಎಂದು ಹೇಳಿದ್ದರು.