ಪತ್ರಕರ್ತರಿಗೆ ಸುಪ್ರಿಯಾ ಸುಳೆ ನೀಡಿದ `ಬ್ರೇಕಿಂಗ್ ನ್ಯೂಸ್` ಸಂದೇಶವೇನು ಗೊತ್ತೇ?
ಮಹಾರಾಷ್ಟ್ರ ರಾಜಕೀಯ ನಾಟಕ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈಗ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಟ್ವಿಟ್ಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಗಾಗಿ ತೆರಳುತ್ತಿರುವ ಕ್ಯಾಮರಾಮೆನ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರ ರಾಜಕೀಯ ನಾಟಕ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈಗ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಟ್ವಿಟ್ಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಗಾಗಿ ತೆರಳುತ್ತಿರುವ ಕ್ಯಾಮರಾಮೆನ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡು 'ಮಾಧ್ಯಮದ ಸ್ನೇಹಿತರೇ - ಬ್ರೇಕಿಂಗ್ ನ್ಯೂಸ್‌ನ ಮಹತ್ವವನ್ನು ನಾನು ಅಲ್ಲಗಳೆಯುವುದಿಲ್ಲ, ಆದರೆ ರಸ್ತೆ ಸುರಕ್ಷತೆಯೂ ಮುಖ್ಯವಾಗಿದೆ. ಈ ಫೋಟೋ ನೋಡಿದ ನಂತರ ನನಗೆ ಕ್ಯಾಮೆರಾಮನ್ ಮತ್ತು ಚಾಲಕನ ಬಗ್ಗೆ ಚಿಂತೆಯಾಗಿದೆ. ನಮ್ಮನ್ನು ನಾವು ನೋಡಿಕೊಳ್ಳಬೇಕೆಂದು ಎಲ್ಲರನ್ನೂ ಕೋರುತ್ತೇನೆ' ಎಂದು ಪತ್ರಕರ್ತರ ರಕ್ಷಣೆಗೆ ಬಗ್ಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಶಿವಸೇನಾ, ಕಾಂಗ್ರೆಸ್, ಮತ್ತು ಎನ್ಸಿಪಿ ಸರ್ಕಾರ ರಚನೆಗೆ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಏಕಾಏಕಿ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡು ಬಿಜೆಪಿ ಮತ್ತು ಎನ್ಸಿಪಿ ಸರ್ಕಾರ ರಚಿಸಿದೆ. ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ, ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.