ನವದೆಹಲಿ: ಮಾಜಿ ಸಿಎಂ ಎನ್.ಡಿ. ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿ ಅವರದ್ದು ಅಸ್ವಾಭಾವಿಕ ಸಾವು ಎಂದು ವೈದಕೀಯ ವರದಿಯಿಂದ ತಿಳಿದುಬಂದಿದೆ . ಈ ಹಿನ್ನಲೆಯಲ್ಲಿ ಈಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಇಂದು ಅವರ ಸಾವಿನ ಪ್ರಕರಣವನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಗಿತ್ತು.ಈ ಕುರಿತು ತನಿಖೆ ನಡೆಸಿದಾಗ ಅವರದ್ದು ಅಸಹಜ ಸಾವು ಎಂದು ತಿಳಿದುಬಂದಿದೆ.ರೋಹಿತ್ ಶೇಖರ್ ಮಂಗಳವಾರದ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಆದರೆ ಆಗ ಅವರ ದೇಹದ ಮೇಲೆ ಯಾವುದೇ ರೀತಿಯ ಬ್ಯಾಹ್ಯ ಗಾಯಗಳು ಆಗಿದ್ದಿಲ್ಲ ಎಂದು ದಕ್ಷಿಣ ದೆಹಲಿಯ ಡಿಸಿಪಿ ವಿಜಯ್ ಕುಮಾರ್ ಹೇಳಿದ್ದರು.



ಪ್ರಕರಣವನ್ನು ಇಂದು ಕ್ರೈಂ ಬ್ರ್ಯಾಂಚ್ ಗೆ ವರ್ಗಾಯಿಸಿದಾಗ ದೆಹಲಿಯ ಅವರ ಮನೆಯಲ್ಲಿ ತನಿಖೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಅವರ ಸಾವಿನ ವಿಚಾರವಾಗಿ ಹಲವು ಮಹತ್ವದ ಸಂಗತಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.


ರೋಹಿತ್ ಅವರ ತಾಯಿ ಉಜ್ಜಲಾ ಶರ್ಮಾ ಅವರು ಅದೇ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಪಡೆಯುತ್ತಿದ್ದು . ತನ್ನ ಮಗನು ಅಸ್ವಸ್ಥರಾಗಿದ್ದು, ಮೂಗುನಿಂದ ರಕ್ತಸ್ರಾವವಾಗುತ್ತಿದೆ ಎನ್ನುವ ಮಾಹಿತಿಯನ್ನು ಅವರು ಮನೆಯಿಂದ ಬಂದಂತಹ ಕರೆ ಮೂಲಕ ತಿಳಿದುಕೊಂಡಿದ್ದಾರೆ. ಆದರೆ ಈ ವೇಳೆ ತಮ್ಮ ಮಗನ ಸಾವಿನ ವಿಚಾರವಾಗಿ ಪ್ರತಿಕ್ರಿಯಿಸಿ "ಅವನ ಸಾವು ಸ್ವಾಭಾವಿಕವಾಗಿದೆ.ಈ ವಿಚಾರವಾಗಿ ನನಗೆ ಯಾವುದೇ ಸಂಶಯವಿಲ್ಲ.ಆದರೆ ಏತಕ್ಕೆ ಆತನು ಮೃತಪಟ್ಟಿದ್ದಾನೆ ಎನ್ನುವುದನ್ನು ಸೂಕ್ತ ಸಂದರ್ಭದಲ್ಲಿ ತಿಳಿಸುತ್ತೇನೆ " ಎಂದು ಹೇಳಿದ್ದರು.