ನಾಗ್ಪುರ: ಮುಂಬರುವ ಮಹಾರಾಷ್ಟ್ರ ಚುನಾವಣೆಗೆ ಪಕ್ಷದ ಪ್ರಣಾಳಿಕೆಯಲ್ಲಿ ಭಾರತ ರತ್ನಕ್ಕೆ ವೀರ್ ಸಾವರ್ಕರ್ ಹೆಸರನ್ನು ಪ್ರಸ್ತಾಪಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಬುಧವಾರ ವಾಗ್ದಾಳಿ ನಡೆಸಿದ್ದು, ವೀರ್ ಸಾವರ್ಕರ್ ಬದಲಿಗೆ ಬಿಜೆಪಿ ನೇರವಾಗಿ ನಾಥುರಾಮ್ ಗೋಡ್ಸೆಗೆ ಅತ್ಯುನ್ನತ ಗೌರವದೊಂದಿಗೆ ಪ್ರಶಸ್ತಿ ನೀಡಲಿ ಎಂದು ಟೀಕಿಸಿದ್ದಾರೆ.


COMMERCIAL BREAK
SCROLL TO CONTINUE READING

"ಸಾವರ್ಕರ್ ಅವರು ಗಾಂಧಿಯನ್ನು ಹತ್ಯೆ ಮಾಡಲು ಸಂಚು ಹೂಡಿದ್ದರೆಂದು ಆರೋಪಿಸಲಾಗಿತ್ತು. ಆದರೆ ನಾಥುರಾಮ್ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ. ಈ ವರ್ಷ ನಾವು ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, ಎನ್‌ಡಿಎ ಸರ್ಕಾರ ನೇರವಾಗಿ ಭಾರತ ರತ್ನವನ್ನು ಗೋಡ್ಸೆಗೆ ನೀಡಲಿ" ಎಂದು ತಿವಾರಿ ಹೇಳಿದರು.


ಇದಕ್ಕೂ ಮುನ್ನ ಬುಧವಾರ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಸಹ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವ ಪ್ರಸ್ತಾಪಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.