ನವದೆಹಲಿ: ಲೋಕಸಭಾ ಚುನಾವಣೆಯ ರಣಭೇರಿ ಪ್ರಾರಂಭವಾಗಿದೆ. ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ 264 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದು ಬಹುಮತಕ್ಕಿಂತ ಕೇವಲ ಎಂಟು ಸ್ಥಾನಗಳು ಮಾತ್ರ ಕಡಿಮೆಯಾಗಲಿದೆ ಎಂದು ಸೆವೋಕ್ತಾರ್-ಐಎಎನ್ಎಸ್ ಸಮೀಕ್ಷೆ  ತಿಳಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ಯುಪಿಎ 141 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ, ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆಯನ್ನು ಬಹಳ ಮುಖ್ಯವಾದುದಾಗಿದೆ.


COMMERCIAL BREAK
SCROLL TO CONTINUE READING

ಮೇ 23ರಂದು ಹೊರಬೀಳಲಿರುವ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್), ಆಂಧ್ರ ಪ್ರದೇಶದ ಮುಖ್ಯ ವಿಪಕ್ಷ ವೈಎಸ್ಆರ್ ಕಾಂಗ್ರೆಸ್ ಮತ್ತು ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ(ಬಿಜೆಡಿ) ಸರ್ಕಾರ ರಚನೆಯಲ್ಲಿ ವಿಶೇಷ ಪಾತ್ರ ನಿರ್ವಹಿಸಲಿವೆ ಎನ್ನಲಾಗಿದೆ.


ಸಮೀಕ್ಷೆಯ ಪ್ರಕಾರ, ಆಂಧ್ರದಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷವು 14 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 34 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸೆವೋಟರ್-ಐಎಎನ್ಸ್ ಸಮೀಕ್ಷೆಯ ಪ್ರಕಾರ, ವೈಎಸ್ಆರ್ ಕಾಂಗ್ರೆಸ್ ಪಕ್ಷ, ಟಿಆರ್ಎಸ್ ಮತ್ತು ಬಿಜೆಡಿ ಒಟ್ಟು 36 ಸ್ಥಾನಗಳನ್ನು ಪಡೆಯಬಹುದು. ಆಂಧ್ರ ಪ್ರದೇಶದ 11 ಸಂಸದೀಯ ಸ್ಥಾನಗಳನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಒಡಿಶಾದಲ್ಲಿ ಬಿಜೆಡಿ ಒಂಬತ್ತು ಸ್ಥಾನಗಳನ್ನು ಪಡೆಯಬಹುದು. ತೆಲಂಗಾಣದಲ್ಲಿ ಟಿಆರ್ಎಸ್ ಅಲೆ ಜೋರಾಗಿದ್ದು ರಾಜ್ಯದಲ್ಲಿ 17 ಲೋಕಸಭಾ ಕ್ಷೇತ್ರಗಳಲ್ಲಿ 16 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ.


ಈ ಎಲ್ಲ ಮೂರು ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸಿನ ಮೈತ್ರಿಗಳೆರಡರಿಂದ ಸಮಾನ ಅಂತರವನ್ನು ಉಳಿಸಿಕೊಂಡಿದೆ. ಅಂತಹ ಸನ್ನಿವೇಶದಲ್ಲಿ, ಅವರು ಕೇಂದ್ರ ಸರಕಾರದ ರಚನೆಯಲ್ಲಿ ಬಹಳ ವಿಶೇಷವಾದ ಪಾತ್ರವನ್ನು ಹೊಂದಿರುತ್ತಾರೆ. 


ಈ ಪಕ್ಷಗಳಲ್ಲಿ ಯಾವುದೇ ಪಕ್ಷವು ಎನ್​ಡಿಎ ಗೆ ತನ್ನ ಬಹುಮತ ಸೂಚಿಸಿದಲ್ಲಿ ಸರ್ಕಾರ ರಚನೆ ಸುಲಭವಾಗುತ್ತದೆ. ಅನೌಪಚಾರಿಕ ತೃತೀಯ ರಂಗದಲ್ಲಿ ಬಿಜೆಪಿ-ಕಾಂಗ್ರೆಸೇತರ ಪಕ್ಷಗಳ ಪಾತ್ರವು ತುಂಬಾ ಮುಖ್ಯವಾಗಿದೆ. ಎನ್​ಡಿಎಯಲ್ಲಿ ಜನತಾ ದಳ (ಯುನೈಟೆಡ್) ಮತ್ತು ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ) ಬಿಹಾರದಲ್ಲಿ 20 ಸ್ಥಾನಗಳನ್ನು ಪಡೆಯಲಿದ್ದು, ಶಿವಸೇನೆ ಮಹಾರಾಷ್ಟ್ರದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.