ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಎನ್​ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ 125 ಮತಗಳನ್ನು ಪಡೆದರೆ, ಯುಪಿಎ ಅಭ್ಯರ್ಥಿಯಾಗಿ ಕಣಕ್ಕಿಳಿಡಿದ್ದ ಕನ್ನಡಿಗ ಬಿ.ಕೆ. ಹರಿಪ್ರಸಾದ್ ಅವರು 105 ಮತಗಳನ್ನು ಪಡೆದರು.


ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಉಪ ಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್ ಆಯ್ಕೆಯಾಗಿರುವುದನ್ನು ಪ್ರಕಟಿಸಿದರು.


245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್'ಡಿಎಗೆ ಬಹುಮತವಿರಲಿಲ್ಲ. ಹೀಗಾಗಿ ಅನ್ಯಪಕ್ಷಗಳನ್ನು ಅದು ನೆಚ್ಚಿಕೊಂಡಿತ್ತು. ಎನ್‌ಡಿಯೇತರ ಪಕ್ಷಗಳಾದ ಬಿಜೆಡಿ ಯ 9 ಸದಸ್ಯರು ಮತ್ತು ಟಿಆರ್‌ಎಸ್‌ನ 6  ಸದಸ್ಯರು ಹರಿವಂಶ್‌ ಅವರಿಗೆ ಮತ ಹಾಕಿದ ಕಾರಣ ಅವರು ಜಯಗಳಿಸಲು ಸಾಧ್ಯವಾಯಿತು. 


ರಾಜ್ಯಸಭೆ ಉಪ ಸಭಾಪತಿಯಾಗಿ ಆಯ್ಕೆಯಾದ ಹರಿವಂಶ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದರು.