ಮಿಡ್ನಾಪುರ್: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ದಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆಯಲ್ಲಿ ಟೆಂಟ್ ಕುಸಿದು ಸುಮಾರು 20 ಜನರಿಗೆ ಗಾಯಗಳಾದ ಘಟನೆ ನಡೆದಿದೆ.



COMMERCIAL BREAK
SCROLL TO CONTINUE READING

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಎನ್ನಲಾಗಿದೆ.ಕಿಸಾನ್ ಕಲ್ಯಾಣ ರ್ಯಾಲಿಯಲ್ಲಿ ಪ್ರಧಾನಿ ಭಾಷಣದ ವೇಳೆಯಲ್ಲಿ ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.




ಅಧಿಕಾರಿಗಳು ಹೇಳುವಂತೆ ಪ್ರಧಾನಿ ಟೆಂಟ್ ಕುಸಿದಿದ್ದನ್ನು ನೋಡಿದ್ದು  ಪಕ್ಕದಲ್ಲೇ ಇದ್ದ ಎಸ್ ಪಿ ಜಿ ಅಧಿಕಾರಿಗಳಿಗೆ ಗಾಯಾಳುಗಳನ್ನು ನೋಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ರಕ್ಷಣಾ ಸಿಬ್ಬಂಧಿ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.