ನೀಟ್ ಪಿಜಿ 2022 ಫಲಿತಾಂಶ ಪ್ರಕಟ..!ನಿಮ್ಮ ಫಲಿತಾಂಶವನ್ನು ಇಲ್ಲಿ ನೋಡಬಹುದು
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2022 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಬುಧವಾರದಂದು (ಜೂನ್ 1) ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ NEET PG 2022 ಫಲಿತಾಂಶವನ್ನು natboard.edu.in ನಲ್ಲಿ ಪರಿಶೀಲಿಸಬಹುದು.
ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2022 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಬುಧವಾರದಂದು (ಜೂನ್ 1) ಪ್ರಕಟಿಸಿದೆ.ಅಭ್ಯರ್ಥಿಗಳು ತಮ್ಮ NEET PG 2022 ಫಲಿತಾಂಶವನ್ನು natboard.edu.in ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ: ಸುಪ್ರೀಂ ಆದೇಶ ಬೆನ್ನಲ್ಲೇ ಕಮಿಟಿಯಿಂದ ಸರ್ಕಾರಕ್ಕೆ ಡಿಮಿಲಿಟೇಷನ್ ಕರಡುಪಟ್ಟಿ ಸಲ್ಲಿಕೆ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದಾಖಲೆಯ 10 ದಿನಗಳಲ್ಲಿ NEET PG ಫಲಿತಾಂಶವನ್ನು ಪ್ರಕಟಿಸಿದ್ದಕ್ಕಾಗಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು (NBEMS) ಶ್ಲಾಘಿಸಿದ್ದಾರೆ. 'NEET-PG ಫಲಿತಾಂಶ ಹೊರಬಿದ್ದಿದೆ! NEET-PG ಗೆ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ.ಇದೆ ವೇಳೆ ಹತ್ತು ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿದ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು ಶ್ಲಾಘಿಸುತ್ತೇನೆ 'ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ: ನ್ಯಾ.ಕೆ.ಭಕ್ತವತ್ಸಲ ಆಯೋಗಕ್ಕೆ ಅಹವಾಲು ಸಲ್ಲಿಸಲು ಸೂಚನೆ
NEET PG 2022 ಪರೀಕ್ಷೆಯು ಮೇ 21 ರಂದು ದೇಶಾದ್ಯಂತ 849 ಕೇಂದ್ರಗಳಲ್ಲಿ ನಡೆಯಿತು.ಈ ವರ್ಷ 1,82,318 ಅಭ್ಯರ್ಥಿಗಳು ನೀಟ್ ಪಿಜಿ ಪರೀಕ್ಷೆಗೆ ಹಾಜರಾಗಿದ್ದರು.
NEET PG 2022 ಫಲಿತಾಂಶವನ್ನು ಇಲ್ಲಿ ಪರಿಶೀಲಿಸಿ..
1. nbe.edu.in ಅಥವಾ nbe.edu.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮುಖಪುಟದಲ್ಲಿ, NEET PG ಮೇಲೆ ಕ್ಲಿಕ್ ಮಾಡಿ
3. ಫಲಿತಾಂಶಗಳ ಲಿಂಕ್ ಅನ್ನು ಕ್ಲಿಕ್ ಮಾಡಿ
4. NEET PG 2022 ಫಲಿತಾಂಶ PDF ನಲ್ಲಿ ಕಾಣಿಸಿಕೊಳ್ಳುತ್ತದೆ.
5. ನಿಮ್ಮ NEET PG 2022 ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.
6. ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ