NEET UG 2024 Retest Result : 1,563 ಅಭ್ಯರ್ಥಿಗಳಿಗೆ ನಡೆಸಲಾದ NEET UG 2024 ಮರು ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಪ್ರಕಟಿಸಿದೆ.ಮರುಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. NEET ಯುಜಿ ಮರುಪರೀಕ್ಷೆಯ ಅಂತಿಮ ಉತ್ತರ ಕೀಯನ್ನು ಶನಿವಾರ ಬಿಡುಗಡೆ ಮಾಡಲಾಗಿತ್ತು. 


COMMERCIAL BREAK
SCROLL TO CONTINUE READING

ಎನ್‌ಟಿಎಯು 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸಿತ್ತು.ಪರೀಕ್ಷಾ ಸಮಯದ ನಷ್ಟದ ಕಾರಣದಿಂದ ಆರಂಭದಲ್ಲಿ ಈ ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿದ್ದರು.ಈ ಪೈಕಿ 813 ಅಭ್ಯರ್ಥಿಗಳು ಮರುಪರೀಕ್ಷೆ ತೆಗೆದುಕೊಂಡಿದ್ದಾರೆ. 


ಇದನ್ನೂ ಓದಿ : Daily GK Quiz: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?


ಜೂನ್ 23, 2024 ರಂದು ಮರು-ಪರೀಕ್ಷೆಯ ನಂತರ, ಪರೀಕ್ಷಾ ಸಂಸ್ಥೆಯು ತಾತ್ಕಾಲಿಕ ಆನ್ಸರ್ ಕೀಗಳನ್ನು, OMR ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮತ್ತು ಜೂನ್ 28 ರಂದು 813 ಅಭ್ಯರ್ಥಿಗಳ ಪ್ರತಿಕ್ರಿಯೆಗಳನ್ನು ಬಿಡುಗಡೆ ಮಾಡಿತ್ತು. 


"ಜೂನ್ 23, 2024 ರಂದು ಮರು ಪರೀಕ್ಷೆಗೆ ಹಾಜರಾಗಿದ್ದ NEET(UG) 2024 ರ ಎಲ್ಲಾ ಅಭ್ಯರ್ಥಿಗಳ ಪರಿಷ್ಕೃತ ಅಂಕಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ  ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಲಾಗ್ ಇನ್ ಆಗುವ ಮೂಲಕ ತಮ್ಮ ಪರಿಷ್ಕೃತ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು. 


ಮೇ 5 ರಂದು NTA ನಿರ್ವಹಿಸಿದ NEET-UG ಪರೀಕ್ಷೆಯು ವಿವಾದವನ್ನು ಹುಟ್ಟುಹಾಕಿತ್ತು. 67 ವಿದ್ಯಾರ್ಥಿಗಳು ಅದರಲ್ಲಿಯೂ ಒಂದೇ ಕೇಂದ್ರದ ಆರು ವಿದ್ಯಾರ್ಥಿಗಳು ಸೇರಿದಂತೆ 720 ರಷ್ಟು ಪರಿಪೂರ್ಣ ಅಂಕಗಳನ್ನು ಗಳಿಸಿದ್ದರು.  ಅಲ್ಲದೆ, 1,563 ವಿದ್ಯಾರ್ಥಿಗಳಿಗೆ ‘ಗ್ರೇಸ್‌ ಮಾರ್ಕ್‌’ ನೀಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿತ್ತು.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಮೋದಿ ಗುಡ್ ನ್ಯೂಸ್..! ಇಂತಹವರಿಗೂ 6 ತಿಂಗಳ ಹೆರಿಗೆ ರಜೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ