`ಇಂಡಿಯಾ ಕಾ ಡಿಎನ್ಎ`: ಕಾಶ್ಮೀರ ಸಮಸ್ಯೆಗೆ ನೆಹರೂ ನೀತಿ ಕಾರಣ- ಅಮಿತ್ ಶಾ
ಕಾಂಗ್ರೆಸ್ ಆಡಳಿತದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ತಪ್ಪುಗಳು ಮರೆಯಾಗಿವೆ ಎಂದು ಅಮಿತ್ ಷಾ ಹೇಳಿದರು.
ನವದೆಹಲಿ: ಜೀ ನ್ಯೂಸ್ ನಡೆಸಿದ ಇಂಡಿಯಾ ಕಾ ಡಿಎನ್ಎ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮಿತ್ ಶಾ, ಜೀ ಸಂಪಾದಕರಾದ ಸುಧೀರ್ ಚೌಧರಿಯವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಜಮ್ಮು ಕಾಶ್ಮೀರದ ಸಮಸ್ಯೆಗೆ ಕುರಿತು ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ನೀತಿಯನ್ನು ಪ್ರಶ್ನಿಸಿದರು.
ಜವಾಹರಲಾಲ್ ನೆಹರೂ ಅವರ ನೀತಿ ಕಾಶ್ಮೀರ ಸಮಸ್ಯೆಗೆ ಕಾರಣವಾಗಿದೆ. ಪಂಡಿತ್ ನೆಹರೂರಿಂದ ಚೀನಾ ವಿಟೊ ಅಧಿಕಾರವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ತಪ್ಪುಗಳು ಮರೆಯಾಗಿವೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಇದೇ ವೇಳೆ, ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಧಾನಿ ಬೇಕೆಂದು ಜಮ್ಮು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಧಾನಿ ಮಾಡುವ ಪ್ರಯತ್ನಗಳಿಗೆ ನಾವು ಸಹಕಾರ ನೀಡಬಾರದು ಎಂದು ಅಮಿತ್ ಶಾ ಹೇಳಿದರು. ಇಂದು ಇಡೀ ಕಾಶ್ಮೀರ ನಮ್ಮ ಬಳಿ ಇರುತ್ತಿತ್ತು. ಆದರೆ ಪಂಡಿತ್ ನೆಹರೂರವರ ಕೆಲವು ನಿರ್ಧಾರಗಳು ಕಾಶೀರ ಸಮಸ್ಯೆಗೆ ಕಾರಣವಾಗಿದೆ. ಇದು ಯಾರಿಗೆ ತಾನೇ ತಿಳಿದಿಲ್ಲ ಎಂದು ಶಾ ಪ್ರಶ್ನಿಸಿದರು.
ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಪದೇ ಪದೇ ಅಡ್ಡಗಾಲಾಕುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾವು ಚೀನಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಿದ್ದೇವೆ" ಎಂದು ಹೇಳಿದರು.
ಉತ್ತರ ಪ್ರದೇಶದ 4 ಕೋಟಿ 11 ಲಕ್ಷ ಜನರಿಗೆ ನಾವು ನೇರ ಪ್ರಯೋಜನ ನೀಡಿದ್ದೇವೆ. ನಮಗೆ ನಮ್ಮ ಹೊಸ ಮತ ಬ್ಯಾಂಕ್ ಬಗ್ಗೆ ತಿಳಿದಿದೆ. ಮೋದಿ ಜಿ ಮಾಡಿದ ಕೆಲಸದ ಆಧಾರದ ಮೇಲೆ ನಾವು ಯುಪಿ ಚುನಾವಣೆಗಳಲ್ಲಿ ಹೋರಾಡಿದ್ದೇವೆ ಅಮಿತ್ ಶಾ ತಿಳಿಸಿದರು.
ಇದು ಕಾಂಗ್ರೆಸ್ ಮುಕ್ತ ಭಾರತ ಭಾಗ ಎರಡೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನೂ ಐದು ವರ್ಷ ಕಾಂಗ್ರೆಸ್ ಅಧಿಕಾರದಿಂದ ದೂರವಿರಲಿದೆ ಎಂದು ಹೇಳಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಜನರಿಂದ ಆಯ್ಕೆಯಾಗಿ ಲೋಕಸಭೆಗೆ ಬರಬೇಕೆಂಬುದು ನನ್ನ ಅದೃಷ್ಟದ ವಿಷಯವಾಗಿದೆ. ನಾನು ಬೂತ್ ಮಟ್ಟದಲ್ಲಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದ ವ್ಯಕ್ತಿ. ಇಂದು ಅದೇ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷನಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.