ನವದೆಹಲಿ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಎಲ್ಲವೂ ಸುಗಮವಾಗಿದೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆಯಿಂದ ಹಿಡಿದು ಆನ್ ಲೈನ್ ಶಾಪಿಂಗ್ ಸೇರಿದಂತೆ ಎಲ್ಲಾ ವ್ಯವಹಾರಗಳೂ ಕುಳಿತಲ್ಲಿಂದಲೇ ಮುಗಿದುಹೋಗುತ್ತವೆ. ಆದರೀಗ ಇಂಥ ಸುಲಭ ಹಣಕಾಸಿನ ವ್ಯವಹಾರಗಳಿಗೆ ಬಳಸುವ ಆಪ್'ಗಳ ಮೇಲೆ ಹೆಚ್ಚು ನಿಗಾ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(UPI)ಮೂಲಕ ಹಣ ವರ್ಗಾವಣೆ ಸುಲಭವಾಗಿದ್ದರೂ ಸಹ ಇದು ಅವ್ಯವಹಾರ ಮತ್ತು ಅಕ್ರಮಗಳಿಗೆ ದಾರಿಮಾಡಿಕೊಡುತ್ತಿದೆ ಎಂದು ಆರ್ಬಿಐಗೆ ಹಲವು ದೂರುಗಳು ಸಲ್ಲಿಕೆಯಾಗಿವೆ.  ಈ ಸಂಬಂಧ ಎಚ್ಚೆತ್ತ ಆರ್ಬಿಐ ಫೆಬ್ರವರಿ 14ರಂದು ಪ್ರಕಟಣೆಯೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಮೊಬೈಲ್ ಬಳಕೆದಾರರು ಯಾವುದೇ ಕಾರಣಕ್ಕೂ 'AnyDesk' ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳದಂತೆ ಸೂಚನೆ ನೀಡಿದೆ. ಒಂದು ವೇಳೆ ನೀವೇನಾದರೂ ಈ ಆಪ್ ಡೌನ್ಲೋಡ್ ಮಾಡಿಕೊಂಡಿದ್ದೇ ಆದಲ್ಲಿ, ಹ್ಯಾಕರ್'ಗಳು ಸುಲಭವಾಗಿ ನಿಮ್ಮ ಖಾತೆಗಳನ್ನು ಕ್ಷಣಾರ್ಧದಲ್ಲಿ ಹ್ಯಾಕ್ ಮಾಡುವ ಸಾಧ್ಯತೆಯಿದೆ!


ಒಂದು ವೇಳೆ ನಿಮಗೇ ತಿಳಿಯದಂತೆ ಮೊಬೈಲ್'ನಲ್ಲಿ ಆಪ್ ಡೌನ್ಲೋಡ್ ಆಗಿದ್ದೇ ಆದಲ್ಲಿ, ನಿಮ್ಮ ಮೊಬೈಲ್ ಡಾಟಾ ಆಕ್ಸಿಸ್'ಗೆ ಒಪ್ಪಿಗೆ ಕೇಳುತ್ತದೆ. ಡಾಟಾ ಆಕ್ಸಿಸ್'ಗೆ ಒಪ್ಪಿಗೆ ನಿದುತ್ತಿದ್ದಂತೆಯೇ ನಿಮ್ಮ ಹಾತೆಯ ಸಂಪೂರ್ಣ ಮಾಹಿತಿ ಹ್ಯಾಕರ್'ಗಳ ಕೈ ತಲುಪಲಿದೆ. ಈ ಆಪ್ ಒಂದು ರಿಮೋಟ್'ನಂತೆ ಕೆಲಸ ಮಾಡಲಿದ್ದು, ಒಂದು ಸಾಧನದಿಂದ ಮತ್ತೊಂದು ಸಾಧನಕ್ಕೆ ಸಂಪರ್ಕ ಕಲ್ಪಿಸಲು ಬಳಸಲಾಗುತ್ತದೆ.