ದೆಹಲಿ : ಭಾರತೀಯ ಮೂರು ನೋಟು ಮುದ್ರಣಾಲಯಗಲ್ಲಿ ಮುದ್ರಿಸಲಾದ 500 ರೂ ನೋಟುಗಳ ಸಂಖ್ಯೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ವೀಕರಿಸಿದ ಸಂಖ್ಯೆಗಳ ನಡುವೆ ಭಾರಿ ವ್ಯತ್ಯಾಸ ಕಂಡು ಬಂದಿದೆ ಎಂದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ, ಲೆಕ್ಕಕ್ಕೆ ಸಿಗದ ನೋಟುಗಳ ಮೌಲ್ಯ 88,032.5 ಕೋಟಿ ರೂ. ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಮೂರು ಭಾರತೀಯ ಟಂಕಸಾಲೆಗಳು (ನೋಟು ಮುದ್ರಣಾಲಯಗಳು) ಹೊಸದಾಗಿ 8,810.65 ಮಿಲಿಯನ್ 500 ರೂ. ನೋಟುಗಳನ್ನು ವಿನ್ಯಾಸಗೊಳಿಸಿ ಆರ್‌ಬಿಐಗೆ ನೀಡಿತ್ತಂತೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಉಳಿದ ನೋಟುಗಳು ಎಲ್ಲಿಗೆ ಹೋದವು ಎಂಬ ಯಕ್ಷ ಪ್ರಶ್ನೆ ಮೂಡಿದೆ.


ಇದನ್ನೂ ಓದಿ: PM Kisan: ಇನ್ಮುಂದೆ ಈ ರಾಜ್ಯದ ರೈತರಿಗೆ ಪ್ರತಿ ವರ್ಷ ಸಿಗುತ್ತೆ 12 ಸಾವಿರ ರೂ. ಹಣ


ಎಫ್‌ಪಿಜೆ ಪ್ರಶ್ನೆಗೆ ಉತ್ತರಿಸದ ಆರ್‌ಬಿಐ : ಭಾರತೀಯ ನೋಟುಗಳನ್ನು ಮೂರು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ (ಪಿ) ಲಿಮಿಟೆಡ್, ಬೆಂಗಳೂರು, ಕರೆನ್ಸಿ ನೋಟ್ ಪ್ರೆಸ್, ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್. ಈ ಮೂರು ಟಂಕಸಾಲೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮುದ್ರಿತ ನೋಟುಗಳನ್ನು ಕಳುಹಿಸುತ್ತವೆ. ದೇಶದಲ್ಲಿ ನಗದು ಹರಿವನ್ನು ನಿರ್ವಹಿಸುವುದು ಮತ್ತು ನಿರ್ವಹಣೆ ಮಾಡುವುದು ಆರ್‌ಬಿಐ.


ಆರ್‌ಟಿಐ ಕಾರ್ಯಕರ್ತ ಮನೋರಂಜನ್ ರಾಯ್ 500 ರೂ. ನೋಟುಗಳ ಸ್ಥಿತಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ RTI ಅರ್ಜಿಯನ್ನು ಸಲ್ಲಿಸಿದ್ದರು ಎಂದು ಎಫ್‌ಪಿಜೆ (FPJ) ತಿಳಿಸಿದೆ. ವರದಿ ಪ್ರಕಾರ, ನಾಸಿಕ್‌ ಟಂಕಸಾಲೆ ಒಟ್ಟು 375.450 ಮಿಲಿಯನ್‌ 500 ರೂ. ನೋಟನ್ನು ಮುದ್ರಿಸಿದೆ ಎಂದು ವರದಿಯಾಗಿದೆ. ಆದ್ರೆ ಆರ್‌ಬಿಐ ದಾಖಲೆಯಗಳಲ್ಲಿ, ಏಪ್ರಿಲ್‌ 2015 ಮತ್ತು ಡಿಸೆಂಬರ್‌ 2016ರ ನಡುವೆ 345 ಮಿಲಿಯನ್‌ ನೋಟುಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಮತ್ತೊಂದು ಆರ್‌ಟಿಐ ಪ್ರಶ್ನೆಗೆ ನಾಸಿಕ್‌ ಕರೆನ್ಸಿ ನೋಟ್‌ ಮುದ್ರಣಾಲಯ ಉತ್ತರ ನೀಡಿದೆ. ಆದ್ರೆ, ಹಣಕಾಸು ವರ್ಷ 2015-2016 (ಏಪ್ರಿಲ್ 2015-ಮಾರ್ಚ್ 2016,) ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ RBI ಗೆ 500 ರೂಪಾಯಿಗಳ 210.000 ಮಿಲಿಯನ್ ನೋಟುಗಳನ್ನು ಸರಬರಾಜು ಮಾಡಲಾಗಿದೆ ಎಂದು FPJ ವರದಿ ಮಾಡಿದೆ.


ಇದನ್ನೂ ಓದಿ: ಬಿಪರ್‌ಜೋಯ್ ಚಂಡಮಾರುತಕ್ಕೆ ಸಿಲುಕಿದ್ದ 4 ದಿನದ ಮಗುವನ್ನು ರಕ್ಷಿಸಿದ ಲೇಡಿ ಪೊಲೀಸ್‌..! ವಿಡಿಯೋ ನೋಡಿ


ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣಾಲಯ (ಪಿ) ಲಿಮಿಟೆಡ್, ಬೆಂಗಳೂರು, ಆರ್‌ಬಿಐಗೆ 5,195.65 ಮಿಲಿಯನ್ ನೋಟುಗಳನ್ನು ನೀಡಿದೆ. ಅಲ್ಲದೆ, ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ 2016-2017 ರಲ್ಲಿ ಆರ್‌ಬಿಐಗೆ 1,953.000 ಮಿಲಿಯನ್ ನೋಟುಗಳನ್ನು ಪೂರೈಸಿದೆ, ಆದರೆ ಆರ್‌ಬಿಐ ಈ ಮೂರು ಪ್ರಿಂಟಿಂಗ್ ಪ್ರೆಸ್‌ಗಳಿಂದ 7,260 ಮಿಲಿಯನ್‌ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು FPJ ವರದಿ ಮಾಡಿದೆ.


ಇದರಿಂದ ಮೂರು ನೋಟು ಮುದ್ರಣಾಲಯಗಳಿಂದ ಮುದ್ರಿಸಿದ ಒಟ್ಟು 8810.65 ಮಿಲಿಯನ್ ನೋಟುಗಳಲ್ಲಿ RBI ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ನೋಟುಗಳು ಕಾಣೆಯಾಗಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಆರ್‌ಟಿಐನ ರಾಯ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಆರ್ಥಿಕ ಗುಪ್ತಚರ ಸಂಸ್ಥೆ ಮತ್ತು ಇಡಿಗೆ ಪತ್ರ ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.