New Congress Members Pledge: ಪಕ್ಷವನ್ನು ಬಹಿರಂಗವಾಗಿ ಟೀಕಿಸುವಂತಿಲ್ಲ, ಡ್ರಗ್ಸ್-ಮದ್ಯಪಾನದಿಂದ ದೂರವಿರಬೇಕು, ಪಕ್ಷ ಸೇರಲು 10 ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್
New Congress Members Pledge: ಪಕ್ಷವನ್ನು ಬಹಿರಂಗವಾಗಿ ಟೀಕಿಸುವಂತಿಲ್ಲ, ಡ್ರಗ್ಸ್-ಮದ್ಯಪಾನದಿಂದ ದೂರವಿರಬೇಕು, ಪಕ್ಷ ಸೇರಲು 10 ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್
New Congress Members Pledge - ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು (Congress Primary Membership) ಪಡೆಯಲು ಬಯಸುವ ಯಾವುದೇ ವ್ಯಕ್ತಿ ಮದ್ಯ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವುದಾಗಿ ಘೋಷಿಸಬೇಕು. ಇದು ಮಾತ್ರವಲ್ಲ, ಅವರು ಪಕ್ಷದ ನೀತಿಗಳನ್ನು (Policies Of Congress Party) ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂದು ಅವರು ಒಪ್ಪಿಕೊಳ್ಳಬೇಕು. ದೇಶದ ಅತ್ಯಂತ ಹಳೆಯ ಪಕ್ಷ ಇಂದು ತನ್ನ ಸದಸ್ಯತ್ವದ ಫಾರ್ಮ್ (Congress Party New Membership Form) ನಲ್ಲಿ ಈ ಬದಲಾವಣೆ ಮಾಡಿದೆ.
ಹೊಸ ನಮೂನೆಯ ನೂತನ ಹೊಸ ಸದಸ್ಯರು ಸದಸ್ಯತ್ವದ ಸಮಯದಲ್ಲಿ ತಾವು ಸೀಲಿಂಗ್ ಕಾನೂನನ್ನು ಮೀರಿ ಆಸ್ತಿಯನ್ನು ಹೊಂದಿರುವುದಿಲ್ಲ ಮತ್ತು ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಾಗ ದೈಹಿಕ ಶ್ರಮ ಅಥವಾ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಘೋಷಿಸಬೇಕು. ಹೊಸ ಸದಸ್ಯತ್ವ ಅಭಿಯಾನದ ಮೊದಲು ಸಿದ್ಧಪಡಿಸಿದ ನಮೂನೆಯ ಪ್ರಕಾರ, ಹೊಸ ಸದಸ್ಯರು 10 ವೈಯಕ್ತಿಕ ಭರವಸೆಗಳನ್ನು ನೀಡಬೇಕಾಗಲಿದೆ.
ಇದನ್ನೂ ಓದಿ-ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯತ್ವವನ್ನು ಪುನಸ್ಥಾಪಿಸಲಾಗುವುದು-ಅಮಿತ್ ಶಾ
ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ನವೆಂಬರ್ 1ರಂದು ಸದಸ್ಯತ್ವ ಅಭಿಯಾನ ಆರಂಭವಾಗಲಿದ್ದು, ಮುಂದಿನ ವರ್ಷ ಮಾರ್ಚ್ 31ರವರೆಗೆ ಅದು ನಡೆಯಲಿದೆ. ಹೊಸ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮುಂದಿನ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರವರೆಗೆ ನಡೆಯಲಿದೆ. ಇತ್ತೀಚೆಗೆ, ಈ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಅನುಮೋದಿಸಲಾಗಿದೆ. ಹೊಸ ಸದಸ್ಯರು ತಾವು ಯಾವುದೇ ರೀತಿಯ ಸಾಮಾಜಿಕ ತಾರತಮ್ಯವನ್ನು ಮಾಡುವುದಿಲ್ಲ ಮತ್ತು ಅದನ್ನು ಸಮಾಜದಿಂದ ತೊಡೆದುಹಾಕಲು ಕೆಲಸ ಮಾಡುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಕೊಳ್ಳಬೇಕು.
ಇದನ್ನೂ ಓದಿ-Raj Thackeray Corona Positive: MNS ಮುಖ್ಯಸ್ಥ ರಾಜ್ ಠಾಕ್ರೆಗೆ ಕೊರೊನಾ ಸೋಂಕು, ತಾಯಿಯ ವರದಿ ಕೂಡ ಸಕಾರಾತ್ಮಕ
ಕಾಂಗ್ರೆಸ್ (Indian National Congress) ನ ಹೊಸ ಸದಸ್ಯರು ನೀಡಬೇಕಾದ ಇತರ ಭರವಸೆಗಳು ಇಂತಿವೆ - ನಾನು ಖಾದಿ ಧರಿಸುವುದನ್ನು ರೂಢಿಸಿಕೊಳ್ಳುತ್ತೇನೆ - ನಾನು ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರುತ್ತೇನೆ - ನಾನು ಸಾಮಾಜಿಕ ತಾರತಮ್ಯ ಮಾಡುವುದಿಲ್ಲ ಮತ್ತು ಸಮಾಜದಿಂದ ಅದನ್ನು ತೊಡೆದುಹಾಕಲು ಕೆಲಸ ಮಾಡುತ್ತೇನೆ ಎಂದು ನಂಬುತ್ತೇನೆ. - ಯಾವುದೇ ರೀತಿಯ ದೈಹಿಕ ಶ್ರಮ ಸೇರಿದಂತೆ ನಿಯೋಜಿಸಲಾದ ಕೆಲಸವನ್ನು ಮಾಡಲು ನಾನು ಸಿದ್ಧನಿದ್ದೇನೆ.
ಇದನ್ನೂ ಓದಿ-UP Elections 2022: ಪ್ರಿಯಾಂಕಾ ಗಾಂಧಿಯಾ 'ಏಳು ಪ್ರತಿಜ್ಞೆಗಳು' ಯಾವುವು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ