ಕೊರೊನಾ ನಿರ್ವಹಣೆಗಾಗಿ ತುರ್ತು 23,123 ಕೋಟಿ ರೂ.ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ
ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು, 23,123 ಕೋಟಿ ಮೌಲ್ಯದ ಹೊಸ ತುರ್ತು ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.ಗುರುವಾರದ ಪ್ರಧಾನಿ ಮೋದಿ ನೂತನ ಸಚಿವ ಸಂಪುಟದೊಂದಿಗೆ ನಡೆದ ಸಭೆಯ ನಂತರ ಈ ಘೋಷಣೆ ಬಂದಿದೆ.
ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು, 23,123 ಕೋಟಿ ಮೌಲ್ಯದ ಹೊಸ ತುರ್ತು ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.ಗುರುವಾರದ ಪ್ರಧಾನಿ ಮೋದಿ ನೂತನ ಸಚಿವ ಸಂಪುಟದೊಂದಿಗೆ ನಡೆದ ಸಭೆಯ ನಂತರ ಈ ಘೋಷಣೆ ಬಂದಿದೆ.
ಇದನ್ನೂ ಓದಿ: Johnson & Johnson ನ ಸಿಂಗಲ್ ಶಾಟ್ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ
ನೂತನವಾಗಿ ಈಗ ಕೇಂದ್ರ ಆರೋಗ್ಯ ಸಚಿವರಾಗಿ ನೇಮಕರಾಗಿರುವ ಮನ್ಸುಖ್ ಲಕ್ಷ್ಮಣ್ ಮಾಂಡವಿಯಾ ಅವರು ಪ್ಯಾಕೇಜ್ ವಿವರಗಳನ್ನು ಪ್ರಕಟಿಸಿದರು.ಕರೋನವೈರಸ್ ಸೋಂಕಿನ ವಿನಾಶಕಾರಿ ಎರಡನೇ ಅಲೆಯನ್ನು ನಿಭಾಯಿಸಲು ವಿಫಲವಾದ ಹಿನ್ನಲೆಯಲ್ಲಿ ಹರ್ಷವರ್ಧನ್ ಅವರ ಬದಲಾಗಿ ಮನ್ಸುಖ್ ಲಕ್ಷ್ಮಣ್ ಮಾಂಡವಿಯಾ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:"ಡೆಲ್ಟಾ ರೂಪಾಂತರವು ಶೇ 60 ಕ್ಕಿಂತ ಅಧಿಕ ಪ್ರಸರಣವನ್ನು ಹೊಂದಿದೆ"
ಕಳೆದ ವಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ COVID-19 ಸೋಂಕುಗಳ ಉಲ್ಬಣವು ಸಂಭವಿಸಿದ ನಂತರ ಅಧಿಕೃತ ಸಾವಿನ ಸಂಖ್ಯೆ 400,000 ದಾಟಿದೆ. ತಜ್ಞರು ನಿಜವಾದ ಸಂಖ್ಯೆ ಹೆಚ್ಚು ಇರಬಹುದು ಮತ್ತು ಶೀಘ್ರದಲ್ಲೇ ಮೂರನೇ ಅಲೆ ಬರಲಿದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ
ಭಾರತವನ್ನು ರಾಜಕೀಯ ಮತ್ತು ಆರ್ಥಿಕವಾಗಿ ಪರಿವರ್ತಿಸುವ ಭರವಸೆಯ ಮೇರೆಗೆ 2019 ರಲ್ಲಿ ಪ್ರಧಾನಿ ಮೋದಿಯವರು ಪುನರಾಯ್ಕೆಯಾದ ನಂತರ ಮೊದಲ ಕ್ಯಾಬಿನೆಟ್ ನಲ್ಲಿ ಹಲವು ಪ್ರಮುಖ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.
ಇದನ್ನೂ ಓದಿ:Joe Biden - ಅಮೆರಿಕ ವಾರದ ಅಂತ್ಯದ ವೇಳೆ 160 ಮಿಲಿಯನ್ ಜನರಿಗೆ ಲಸಿಕೆ ಗುರಿ ತಲುಪಲಿದೆ
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಆರೋಗ್ಯ ಸಚಿವರನ್ನು ತೆಗೆದುಹಾಕುವುದು ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ."ಈ ರಾಜೀನಾಮೆಗಳಲ್ಲಿ ಮಂತ್ರಿಗಳಿಗೆ ಒಂದು ಪಾಠವಿದೆ. ವಿಷಯಗಳು ಸರಿಯಾಗಿದ್ದರೆ ಅದರ ಶ್ರೇಯ ಪ್ರಧಾನಿಗೆ ಸಲ್ಲುತ್ತದೆ, ಇಲ್ಲದಿದ್ದರೆ ಅದರ ವೈಫಲ್ಯ ಸಚಿವರ ಮೇಲೆ ಬೀಳುತ್ತದೆ ಎಂದು ಹೇಳಿದರು.
ಆರ್ಥಿಕತೆಯು ಆಳವಾದ ಆರ್ಥಿಕ ಹಿಂಜರಿತದಲ್ಲಿದ್ದರೂ ಸಹ ವಿದೇಶಿ, ಹಣಕಾಸು, ಗೃಹ ಮತ್ತು ರಕ್ಷಣಾ ಇಲಾಖೆಗಳಲ್ಲಿ ಪ್ರಧಾನಿ ಮೋದಿ ತಮ್ಮ ಪ್ರಮುಖ ತಂಡವನ್ನು ಉಳಿಸಿಕೊಂಡಿದ್ದಾರೆ ಮತ್ತು COVID-19 ಸೋಂಕುಗಳ ಉಲ್ಬಣವು ಆರ್ಥಿಕ ಚೇತರಿಕೆಗೆ ತಡೆಯೊಡ್ಡುತ್ತದೆ ಎಂಬ ವ್ಯಾಪಕ ಆತಂಕಗಳಿವೆ.
ಇದನ್ನೂ ಓದಿ: Delta Plus Update: 12 ರಾಜ್ಯಗಳಲ್ಲಿ Delta Plus ರೂಪಾಂತರಿಯ 51 ಪ್ರಕರಣಗಳು, 8 ರಾಜ್ಯಗಳಿಗೆ ಪ್ರತ್ಯೇಕ ನಿರ್ದೇಶನ
ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ರಾಜ್ಯ ಚುನಾವಣೆಗಳಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಯ ಮತ್ತೊಂದು ಪ್ರಮುಖ ಪರೀಕ್ಷೆಯ ಮುಂಚೆಯೇ ಈ ಪುನರ್ರಚನೆ ಬಂದಿದೆ. ಇದಾದ ನಂತರ 2024 ರ ರಾಷ್ಟ್ರೀಯ ಚುನಾವಣೆ ಕೂಡ ಬರಲಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಈಗ ಸಂದಿಗ್ದ ಸ್ಥಿತಿಯಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.