ರಾಯ್ಬರೇಲಿ ಬಳಿ ಹಳಿ ತಪ್ಪಿದ ರೈಲು; 7 ಮಂದಿ ಸಾವು
ಮಾಲ್ಡಾ ಟೌನ್ ನಿಂದ ದೆಹಲಿಗೆ ಬರುವ ಮಾರ್ಗದಲ್ಲಿ ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರಾಯ್ಬರೇಲಿಯ ಹರ್ಚಂದ್ಪುರ್ ರೈಲ್ವೆ ನಿಲ್ದಾಣದ ಬಳಿ ಬೆಳಿಗ್ಗೆ 6.05 ಕ್ಕೆ ಅಪಘಾತಕ್ಕೀಡಾಗಿದೆ.
ನವದೆಹಲಿ: ಮಾಲ್ಡಾ ಟೌನ್ ನಿಂದ ದೆಹಲಿಗೆ ಬರುವ ಮಾರ್ಗದಲ್ಲಿ ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರಾಯ್ಬರೇಲಿಯ ಹರ್ಚಂದ್ಪುರ್ ರೈಲ್ವೆ ನಿಲ್ದಾಣದ ಬಳಿ ಬೆಳಿಗ್ಗೆ 6.05 ಕ್ಕೆ ಅಪಘಾತಕ್ಕೀಡಾಗಿದೆ. ಹರ್ಚಂದ್ ರೈಲು ನಿಲ್ದಾಣ 50 ಮೀಟರ್ ದೂರವಿರುವಾಗ ರೈಲಿನ ಇಂಜಿನ್ ಹಾಗೂ ರೈಲಿನ ಆರು ಬೋಗಿಗಳು ಹಳಿತಪ್ಪಿವೆ. ಈ ಅವಘಡದಿಂದ ಏಳು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರಸ್ತುತ, ಅಪಘಾತದ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಲಕ್ನೋ ಮತ್ತು ವಾರಣಾಸಿಯ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಬಿರುಸಿನ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ರೈಲ್ವೇಯ ಲಕ್ನೋ ವಿಭಾಗದಲ್ಲಿ ಈ ಘಟನೆ ನಡೆದಿದೆ. ಉತ್ತರ ರೈಲ್ವೆ ಜನರಲ್ ಮ್ಯಾನೇಜರ್ ವಿಶ್ವೇಶ್ ಚೌಬೆ ಸ್ಥಳವನ್ನು ತಲುಪಲಿದ್ದಾರೆ.
ನ್ಯೂ ಫರಕ್ಕಾ ಎಕ್ಸ್ಪ್ರೆಸ್ ಮುಖ್ಯವಾಗಿ ದೆಹಲಿಯನ್ನು ಬಂಗಾಳ, ಬಿಹಾರ, ಉತ್ತರ ಪ್ರದೇಶದ ಮೂಲಕ ತಲುಪುತ್ತದೆ. ಈ ಸಂದರ್ಭದಲ್ಲಿ, ಈ ರೈಲುಮಾರ್ಗದಲ್ಲಿರುವ ಹೆಚ್ಚಿನ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ರೈಲ್ವೆದಿಂದ ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಈ ಸಂಖ್ಯೆಗಳ ಮೂಲಕ, ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಬಂಧಿಕರು ಅವರ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.
ಈ ರೈಲು ಅಪಘಾತವನ್ನು ನೆನಪಿನಲ್ಲಿಟ್ಟುಕೊಂಡು ರೈಲ್ವೆಗಳು ವಿವಿಧ ರೈಲು ನಿಲ್ದಾಣಗಳಿಗೆ ಸಹಾಯವಾಣಿ ಬಿಡುಗಡೆ ಮಾಡಿದೆ. ವಿವಿಧ ರೈಲು ನಿಲ್ದಾಣಗಳ ಸಹಾಯವಾಣಿ ಸಂಖ್ಯೆ ಇಲ್ಲಿದೆ...
ಮುಘಲ್ಸಾರೈ (ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ)
ಬಿಎಸ್ಎನ್ಎಲ್ -051212-254145
ರೈಲ್ವೆ ಸಂಖ್ಯೆ -027-73677
ಪಾಟ್ನಾ ಹೆಲ್ಪ್ಲೈನ್ ಸಂಖ್ಯೆ (ಬಿಎಸ್ಎನ್ಎಲ್)
0612-2202290
0612-2202291
0612-2202292
ಮಾಲ್ಡಾ - 03512-266000, 269055
ಭಾಗಲ್ಪುರ್- 0641-24224332421232
ಸಾಹಿಬ್ಗಂಜ್ - 06436-222061
ಜಮಾಲ್ಪುರ್ - 06344-243101
ನ್ಯೂ ಫರಕ್ಕಾ - 7595046555
ಬನಾರಸ್-0542-2503814
ಕಾನ್ಪುರ್- 9794830975, 9794830973
ಪ್ರತಾಪ್ಗಡ್ - 05342-220492
ರಾಯ್ಬರೇಲಿ - 0535 - 2213154
ದೆಹಲಿ ಸಹಾಯವಾಣಿ
011-23341074,1073