New job code : ಇನ್ನು ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ರಜೆ..! ಸರ್ಕಾರ ತರುತ್ತಿದೆ ಹೊಸ ನಿಯಮ
ಮುಂದಿನ ದಿನಗಳಲ್ಲಿ ನೀವು ವಾರದಲ್ಲಿ 4 ದಿನಗಳು ಮಾತ್ರ ಕೆಲಸ ಮಾಡಿದರೆ ಸಾಕು. ವಾರದಲ್ಲಿ ಮೂರು ದಿನಗಳ ಕಾಲ ರಜೆ ಪಡೆಯಬಹುದು. ಹೌದು ಈ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸುತ್ತಿದೆ.
ನವದೆಹಲಿ: New job code : ಮುಂದಿನ ದಿನಗಳಲ್ಲಿ ನೀವು ವಾರದಲ್ಲಿ 4 ದಿನಗಳು ಮಾತ್ರ ಕೆಲಸ ಮಾಡಿದರೆ ಸಾಕು. ವಾರದಲ್ಲಿ ಮೂರು ದಿನಗಳ ಕಾಲ ರಜೆ ಪಡೆಯಬಹುದು. ಹೌದು ಈ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತರಲು ಸರ್ಕಾರ (Government) ಸಿದ್ದತೆ ನಡೆಸುತ್ತಿದೆ. ಹೊಸ ನಿಯಮದ ಪ್ರಕಾರ ನೌಕರರು (workers) ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಈ ಕುರಿತು ಅಂತಿಮ ನಿಯಮಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇದೀಗ ಎಲ್ಲಾ ಕಂಪನಿಗಳಲ್ಲಿ ವಾರದಲ್ಲಿ 6 ದಿನಗಳು ಮತ್ತು ಪ್ರತಿದಿನ 8 ಗಂಟೆಗಳ ಕಾಲ ಕೆಲಸ ಮಾಡುವ ನಿಯಮವಿದೆ. ಹೀಗೆ ಮಾಡಿದರೆ ವಾರಕ್ಕೆ 48 ಗಂಟೆಗಳ ಕೆಲಸ ಮಾಡುವ ಅವಧಿಯ ಗುರಿಯನ್ನು ಪೂರೈಸಬಹುದು. ಇದಾದ ನಂತರ ವಾರದಲ್ಲಿ 1 ದಿನದ ರಜೆ ಇರುತ್ತದೆ.
ವಾರದಲ್ಲಿ 4 ದಿನಗಳು ಮಾತ್ರ ಕೆಲಸ ..!
ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅಪೂರ್ವಾ ಚಂದ್ರ (Apoorav Chandra) ಸೋಮವಾರ ಮಾತನಾಡಿ, ಹೊಸ ನಿಯಮದ ಬಗ್ಗೆ ತಿಳಿಸಿದ್ದಾರೆ. ನೌಕರರು ವಾರದಲ್ಲಿ ಗರಿಷ್ಠ 48 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವ ಮಿತಿಯನ್ನು ನೀಡಲಾಗುವುದು. ಅಂದರೆ, ಒಬ್ಬ ನೌಕರ (worker) ದಿನಕ್ಕೆ 12 ಗಂಟೆ ಕೆಲಸ ಮಾಡಿದ್ದಲ್ಲಿ ನಾಲ್ಕೇ ದಿನಕ್ಕೆ 48 ಗಂಟೆಗಳ ಅವಧಿಯ ಮಿತಿಯನ್ನು ಪೂರೈಸುತ್ತಾನೆ. ಹೀಗಾಗಿ ಆ ನೌಕರ ಉಳಿದ ಮೂರು ದಿನಗಳ ರಜೆಯನ್ನು (holiday) ಕಂಪನಿಯಿಂದ ಪಡೆಯಬಹುದು. ಆದರೆ ನೆನಪಿರಲಿ, ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಿದರೆ ಆಗ 48 ಗಂಟೆಗಳ ಕೆಲಸದ ಅವಧಿಯನ್ನು (Working hour) ಪೂರೈಸಲು 6 ದಿನಗಳವರೆಗೆ ಕೆಲಸ ಮಾಡುವುದು ಅನಿವಾರ್ಯವಾಗಿರುತ್ತದೆ.
ಇದನ್ನೂ ಓದಿ : ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಹೊಗಳುತ್ತಾ ಭಾವುಕರಾದ PM Modi
5 ಗಂಟೆಗಳಿಗಿಂತ ಹೆಚ್ಚು ಸಮಯ ನಿರಂತರ ಕೆಲಸ ಮಾಡುವಂತಿಲ್ಲ :
ಪ್ರಸ್ತಾವನೆಯ ಪ್ರಕಾರ, ಯಾವುದೇ ಉದ್ಯೋಗಿ 5 ಗಂಟೆಗಳಿಗಿಂತ ಹೆಚ್ಚು ಸಮಯದವರೆಗೆ ನಿರಂತರವಾಗಿ ಕೆಲಸ ಮಾಡುವಂತಿಲ್ಲ. ಅಂದರೆ ನೌಕರನಿಗೆ ಕೆಲಸದ ಮಧ್ಯೆ ಅರ್ಧ ಗಂಟೆಯ ವಿರಾಮವನ್ನು (break) ನೀಡಬೇಕು. Code on Occupational safety, Health and Working Conditions, 2020 ರ ಸಂಹಿತೆಯಡಿ ಪ್ರಸ್ತುತ 10.5 ಗಂಟೆಯಿಂದ 12 ಗಂಟೆಗಳವರೆಗೆ ಕೆಲಸದ ಸಮಯವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಸಿದ್ಧಪಡಿಸಲಾಗಿದೆ ಎಂಬ ವರದಿಗಳೂ ಇವೆ.
ಕಂಪನಿಗಳು ತಮ್ಮ ಅನುಕೂಲ ಅನುಸಾರ ಕೆಲಸದ ಅವಧಿಯನ್ನು ನಿರ್ಧರಿಸಬಹುದು :
ಒಂದು ಕಂಪನಿಯು (company) ಒಂದು ವಾರದಲ್ಲಿ ಕೆಲಸದ ಸಮಯವನ್ನು ಕಡಿಮೆ ಮಾಡಲು ಬಯಸಿದರೆ, ಆ ಸಂದರ್ಭದಲ್ಲಿ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಇದೀಗ ವಾರದ 6 ದಿನಗಳಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡುವ ನಿಯಮವಿದೆ. ಅಂದರೆ ದಿನಕ್ಕೆ 8 ಗಂಟೆಯ ಕೆಲಸ. ಕೆಲಸದ ಸಮಯವನ್ನು 12 ಗಂಟೆಗಳವರೆಗೆ ವಿಸ್ತರಿಸುವ ಬಗ್ಗೆ ಕೆಲ ಆತಂಕ ಕೂಡಾ ವ್ಯಕ್ತವಾಗಿದೆ. ಹಾಗಾಗಿ ಈ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು, ಅಪೂರ್ವಾ ಚಂದ್ರ ಹೇಳಿದ್ದಾರೆ.
ಇದನ್ನೂ ಓದಿ : SIM KYC ಸಂದೇಶ ಬಂದರೆ ತಕ್ಷಣವೇ ಅಲರ್ಟ್ ಆಗಿ, ಇಲ್ಲವೇ ನಿಮ್ಮ ಖಾತೆ ಖಾಲಿಯಾಬಹುದು
ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ :
ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುವುದು. ಕೆಲಸದ ಸಮಯವನ್ನು ಬದಲಾಯಿಸುವ ಬಗ್ಗೆ ಕಂಪನಿ ಮತ್ತು ಉದ್ಯೋಗಿಗಳ ಸಹಮತ ಇರಬೇಕಾಗುತ್ತದೆ. ಒಂದು ವೇಳೆ ದಿನಕ್ಕೆ 12 ಗಂಟೆ ಕೆಲಸ ಮಾಡುವುದಾದರೆ, ನಿಯಮದ ಪ್ರಕಾದ ವಾರದಲ್ಲಿ ಮೂರು ದಿನ ರಜೆ (Weekly off) ನೀಡಬೇಕು. Code on Occupational safety, Health and Working Conditions, 2020 ಎಲ್ಲಾ ಕಂಪನಿ ಮತ್ತು ಫ್ಯಾಕ್ಟರಿಗಳಿಗೂ (Factory) ಅನ್ವಯವಾಗುತ್ತದೆ. ಕಂಪನಿ ಮತ್ತು ನೌಕರರ ಸಹಮತಿಯಿಂದ ಕೆಲಸದ ಸಮಯವನ್ನು ಬದಲಾಯಿಸಬಹುದು. ಇದಕ್ಕೆ ಸರ್ಕಾರದ ಅನುಮತಿಯ ಅಗತ್ಯವಿರುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.