ಎಲ್ಲಾ ಬ್ಯಾಂಕುಗಳ ATM ನಿಯಮಗಳಲ್ಲಿ ಬದಲಾವಣೆ
ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸುವಾಗ ನಗರ ಪ್ರದೇಶಗಳಲ್ಲಿನ ಎಟಿಎಂನಲ್ಲಿ ರಾತ್ರಿ 9 ಗಂಟೆ ನಂತರ ನಗದು ತುಂಬಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ನವದೆಹಲಿ: ಎಲ್ಲಾ ಬ್ಯಾಂಕುಗಳ ಎಟಿಎಂಗಳಿಗೆ ಸಂಬಂಧಿಸಿದ ಸರ್ಕಾರ ನಿಯಮಗಳನ್ನು ಬದಲಿಸಿದೆ. ಸರ್ಕಾರ ಜಾರಿಗೊಳಿಸಿರುವ ಆದೇಶದಲ್ಲಿ ಹಲವು ಹಳೆಯ ನಿಯಮಗಳನ್ನು ಬದಲಿಸಲಾಗಿದೆ. ರಕ್ಷಣೆಗಾಗಿ ನಗದು ವ್ಯಾನ್ ಜೊತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಗದು ವ್ಯಾನ್ನಿಂದ ಹಣ ಲೂಟಿ ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.
ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸುವಾಗ ನಗರ ಪ್ರದೇಶಗಳಲ್ಲಿನ ಎಟಿಎಂನಲ್ಲಿ ರಾತ್ರಿ 9 ಗಂಟೆ ನಂತರ ನಗದು ತುಂಬಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಭದ್ರತೆಯ ದೃಷ್ಟಿಯಿಂದ, ಒಂದು ನಗದು ವ್ಯಾನ್ ನಲ್ಲಿ, ಒಂದು ಟ್ರಿಪ್ ನಲ್ಲಿ 5 ಕೋಟಿಗಿಂತ ಹೆಚ್ಚು ಹಣವನ್ನು ಸಾಗಿಸುವಂತಿಲ್ಲ ಎಂದು ಹೇಳಲಾಗಿದೆ. ಅದೇ ವೇಳೆಯಲ್ಲಿ ನಗದು ವ್ಯಾನ್ ನಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ತರಬೇತಿ ನೀಡಲಾಗುತ್ತದೆ. ಅಪರಾಧಿಗಳ ವಾಹನಗಳನ್ನು ಹಿಂದಿಕ್ಕುವುದು ಹೇಗೆ ಮತ್ತು ಇತರ ಅಪಾಯಗಳನ್ನು ಎದುರಿಸುವುದು ಹೇಗೆ ಎಂಬುದರ ತರಬೇತಿ ನೀಡಲಾಗುತ್ತದೆ.
ಎಟಿಎಂ ಮತ್ತು ನಗದು ವ್ಯಾನ್ಗೆ ಸಂಬಂಧಿಸಿದಂತೆ ಜಾರಿಗೊಳಿಸಿರುವ ಆದೇಶದಲ್ಲಿ ನಗದು ವಹಿವಾಟಿನಲ್ಲಿ ತೊಡಗಿರುವ ಸಿಬ್ಬಂದಿಗೆ ಅವರ ಆಧಾರ್ ಪರಿಶೀಲನೆ ಅತ್ಯಗತ್ಯ ಎಂದು ಹೇಳಿದೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿನ ಭದ್ರತೆಯ ದೃಷ್ಟಿಯಿಂದ ಯಾವುದೇ ಎಟಿಎಂನಲ್ಲಿ ಸಂಜೆ 6 ಗಂಟೆಯ ನಂತರ ನಗದು ತುಂಬಲಾಗುವುದಿಲ್ಲ. ಇದಲ್ಲದೆ, ಎಟಿಎಂನಲ್ಲಿ ಹಣ ಲೋಡ್ ಮಾಡಲುಹಿಂದಿನ ದಿನ ಅಥವಾ ಬೆಳಗಿನ ಸಮಯದಲ್ಲಿ ಬ್ಯಾಂಕಿನಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಈ ಬದಲಾವಣೆಯ ಹಿಂದಿರುವ ಉದ್ದೇಶವೆಂದರೆ ಹಣ ಖಾಲಿಯಾಗುವ ಮೊದಲು ಹಣವನ್ನು ಭರ್ತಿ ಮಾಡುವುದು.
ಭದ್ರತಾ ಎಚ್ಚರಿಕೆ ಮತ್ತು ಯಾಂತ್ರಿಕೃತ ಸೈರೆನ್ಗಳನ್ನು ಎಲ್ಲಾ ನಗದು ಜಾಗಗಳಲ್ಲಿ ಭದ್ರತೆಯ ದೃಷ್ಟಿಯಿಂದ ಜಿಎಸ್ಎಮ್ ಆಧಾರಿತ ಆಟೋ-ಡಯಲರ್ ಸ್ಥಾಪಿಸಲಾಗುವುದು. ಕ್ಯಾಶ್ ವ್ಯಾನ್ನಲ್ಲಿ ಕನಿಷ್ಠ ಎರಡು ಭದ್ರತಾ ಸಿಬ್ಬಂದಿಗಳನ್ನು ಸಿಸಿಟಿವಿ, ಲೈವ್ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಮತ್ತು ಬಂದೂಕುಗಳೊಂದಿಗೆ ನಿಯೋಜಿಸಲಾಗುವುದು. ಸುರಕ್ಷತಾ ದೃಷ್ಟಿಯಿಂದ ಬಂದೂಕಿನಲ್ಲಿರುವ ಬುಲೆಟ್ ಗಳನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಬದಲಿಸಲಾಗುವುದು.
ಮಾರ್ಗದರ್ಶಿ ಪ್ರಕಾರ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆ ನಂತರ ಎಟಿಎಂನಲ್ಲಿ ಹಣವನ್ನು ತುಂಬಲಾಗುವುದಿಲ್ಲ. ಪ್ರಸ್ತುತ, ಸುಮಾರು 8,000 ಖಾಸಗಿ ವಾಹನಗಳು ಪ್ರತಿದಿನ 15 ಸಾವಿರ ಕೋಟಿ ರೂ. ನಗದನ್ನು ಬ್ಯಾಂಕುಗಳು, ಕರೆನ್ಸಿ ಚೆಸ್ಟ್ಗಳು ಮತ್ತು ಎಟಿಎಂಗಳಲ್ಲಿ ಜಮಾ ಮಾಡಲಾಗುತ್ತಿದೆ. ಇನ್ನು ಮುಂದೆ ಹಣ ಹೊತ್ತೊಯ್ಯುವ ವ್ಯಾನ್ ನಲ್ಲಿ ಕ್ಯಾಶ್ ಮತ್ತು ಪ್ಯಾಂಜೇಜರ್ ಕಂಪಾರ್ಟ್ಮೆಂಟ್ ನಡುವೆ ಬಲವಾದ ಲಾಕ್ ಇಡಲಾಗುವುದು. ನಗದು ವಿಭಾಗದಲ್ಲಿ ಬಲವಾದ ಉಕ್ಕಿನ ಬಾಗಿಲು ಇರಲಿದೆ. ಇದರ ಬಾಗಿಲು ಒಳಭಾಗದಿಂದ ಹಸ್ತಚಾಲಿತವಾಗಿ ಅಥವಾ ವಿದ್ಯುತ್ಚಾಲಿತವಾಗಿ ತೆರೆಯುತ್ತದೆ.