Delhi chalo protest suspendend : ದೆಹಲಿಯಲ್ಲಿ ಫೆಬ್ರವರಿ ೧೩ ರಿಂದ ನಡೆಯುತ್ತಿರುವ 'ದಿಲ್ಲಿ ಚಲೋ' ಹೋರಾಟ ,  ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (KMM) ಶುಕ್ರವಾರ ತಮ್ಮ ಹೋರಾಟದ ಮುಂದಿನ ನಿರ್ಧಾರವನ್ನು ಫೆಬ್ರವರಿ 29 ರಂದು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ಜಂಟಿ ಸಭೆ ನಡೆಸಿ ಮುಂದಿನ ಕ್ರಿಯಾಯೋಜನೆಯನ್ನು ಗುರುವಾರ ಪ್ರಕಟಿಸಲಾಗುವುದು ಎಂದಿದ್ದರು. ನೆನ್ನೆ ಶುಕ್ರವಾರ ತಮ್ಮ ಹೋರಾಟದ ಮುಂದಿನ ನಿರ್ಧಾರವನ್ನು ಫೆಬ್ರವರಿ 29 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತು  ಇಂದು ಶನಿವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಅಂತಾರಾಜ್ಯ ಗಡಿಗಳಲ್ಲಿ ಮೋಂಬತ್ತಿ ಬೆಳಕು ಮೆರವಣಿಗೆ ನಡೆಸಲಿದ್ದೇವೆ.


ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್, ನಾಳೆ ಭಾನುವಾರ ವಿಶ್ವ ವ್ಯಾಪಾರ ಸಂಘಟನೆ ಕುರಿತು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ಅನೇಕ ಸಮಾಜಪರ ಮತ್ತು ರೈತಪರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಮತ್ತು ಅಲ್ಲಿಯವರೆಗೆ ನಾವು ನಮ್ಮ ಹೋರಾಟವನ್ನು ಸ್ಥಗಿತಗೊಳಿಸುತ್ತೇವೆ ಎಂದರು.


ಇದನ್ನು ಓದಿ :Daily GK Quiz: ಪ್ರಸಿದ್ಧ ʼಪಂಚತಂತ್ರʼವನ್ನು ರಚಿಸಿದ ಲೇಖಕರು ಯಾರು..?   


ಹರಿಯಾಣದಲ್ಲಿ, ರೈತ ಮುಖಂಡರ ವಿರುದ್ಧದ ತಮ್ಮ ನಿಲುವಿನಲ್ಲಿ ಪೊಲೀಸರು ಮೃದು ಧೋರಣೆಗೆ ಬಂದಿದ್ದಾರೆ, ಅವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ನ್ನು ಅನ್ವಯಿಸುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಹೇಳಿದರು. ಪಂಜಾಬ್‌ನಲ್ಲಿ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರ ಸಹೋದರಿಗೆ `1 ಕೋಟಿ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ. ಆದರೆ ಅವರ ಕುಟುಂಬವು ಅದನ್ನು ತಿರಸ್ಕರಿಸಿತು ಬದಲಿಗೆ ನ್ಯಾಯ ಬೇಕು ಎಂದು ಕೇಳಿದರು. ಶುಭಕರನ್‌ನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಆತನ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.


ಇದನ್ನು ಓದಿ : ಇಂದು ಮಾಘ ಪೂರ್ಣಿಮೆ: ಈ ರೀತಿ ಸ್ನಾನ ಮಾಡಿದ್ರೆ ಪಾಪಗಳಿಂದ ಪರಿಹಾರ ಪಡೆಯುತ್ತೀರಿ..!


ಮೃತ ರೈತರ ಸಂಖ್ಯೆ 4ಕ್ಕೆ ಏರಿಕೆ: ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ 'ದೆಹಲಿ ಚಲೋ' ಆಂದೋಲನದ ಭಾಗವಾಗಿದ್ದ 62 ವರ್ಷದ ಮತ್ತೊಬ್ಬ ರೈತರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದರ್ಶನ್ ಸಿಂಗ್ ಅವರು ಬಟಿಂಡಾ ಜಿಲ್ಲೆಯ ಅಮರ್‌ಗಢ ಗ್ರಾಮದವರು ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.


ಇದೇ ಆಂದೋಲನದ ಭಾಗವಾಗಿದ್ದ 72 ವರ್ಷದ ರೈತ ಈ ಹಿಂದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಶಂಭು ಗಡಿಯಲ್ಲಿ 63 ವರ್ಷದ ಮತ್ತೊಬ್ಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೊನ್ನೆ ಬುಧವಾರ, ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ಬಟಿಂಡಾ ಮೂಲದ 21 ವರ್ಷದ ಶುಭಕರನ್ ಸಾವಿಗೀಡಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.