ನವದೆಹಲಿ: ಟುಟಿಕೊರಿನ್ ನಲ್ಲಿರುವ ಸ್ಟೇರ್ಲೆಟ್ ಪ್ಲಾಂಟ್ ಮುಚ್ಚಿಸಲು ಆದೇಶ ನೀಡಿದ್ದ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಪ್ಲಾಂಟ್ ನ್ನು ಮತ್ತೆ ತೆರೆಯಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಶನಿವಾರದಂದು ತೀರ್ಪನ್ನು ನೀಡಿದೆ.


COMMERCIAL BREAK
SCROLL TO CONTINUE READING

ಕೇವಲ ಇಷ್ಟೇ ಅಲ್ಲದೆ ವೇದಾಂತ ಕಂಪನಿಗೆ ಈ ಪ್ರದೇಶದಲ್ಲಿ ನೂರು ಕೋಟಿ ರೂ ವೆಚ್ಚದಲ್ಲಿ ಜನಪರವಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಆದೇಶಿಸಿದೆ.


ಮೇ 22,23 ರಂದು ಪೋಲೀಸರ ಗುಂಡಿನ ದಾಳಿಗೆ ಕನಿಷ್ಠ 13 ಜನರು ಮೃತಪಟ್ಟಿದ್ದರು.ಇದಾದ ನಂತರ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ವೇದಾಂತ ಕಂಪನಿಯ ಸ್ಟೇರ್ಲೇಟ್ ಪ್ಲಾಂಟ್ ನ್ನು ಮುಚ್ಚಿಸಲು ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿತ್ತು.


ಈ ದುರ್ಘಟನೆ ನಡೆದ ನಂತರ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಈ ಪ್ಲಾಂಟ್ ನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಆದ್ದರಿಂದ ನಗರದಲ್ಲಿ ಶಾಂತಿ ನೆಲಸಬೇಕಾಗಿದೆ ಆ ನಿಟ್ಟಿನಲ್ಲಿ ಸರ್ಕಾರ  ಜನರ ಜೊತೆಗೆ ಕೈಜೋಡಿಸಬೇಕೆಂದು ಹೇಳಿದ್ದರು.


ಇನ್ನೊಂದೆಡೆಗೆ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ವೇದಾಂತ ಕಂಪನಿ ತಮಿಳುನಾಡಿನ ನಿರ್ಧಾರ ದುರಾದೃಷ್ಟಕರ ಎಂದು ಹೇಳಿತ್ತು.