ನವ ದೆಹಲಿ: ಬೆಸ-ಸಮ ಯೋಜನೆ ಜಾರಿಗೆ ಸಂಬಂಧಿಸಿದಂತೆ ಶನಿವಾರ ಎನ್ಜಿಟಿ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸೋಮವಾರ ದೆಹಲಿ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ದ್ವಿಚಕ್ರ ವಾಹನಗಳಿಗೆ ಕೋರಿರುವ ವಿನಾಯಿತಿಗೆ ತಾರ್ಕಿಕ ವಿವರಣೆ ನೀಡುವಂತೆ ದೆಹಲಿ ಸರ್ಕಾರಕ್ಕೆ ಸಲಹೆ ನೀಡಿದೆ, ಜೊತೆಗೆ ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ದ್ವಿಚಕ್ರ ವಾಹನಗಳು ಕಾರ್ ಗಳಿಗಿಂತ ಹೆಚ್ಚಿನ ಮಾಲಿನ್ಯವನ್ನುಂಟು ಮಾಡುತ್ತದೆ ಎಂದು ವರದಿಗಳು ತಿಳಿಸಿರುವುದರಿಂದ, ದೆಹಲಿ ಸರ್ಕಾರ ದ್ವಿಚಕ್ರ ವಾಹನಗಳಿಗೆ ಕೋರಿರುವ ವಿನಾಯಿತಿಗೆ ತಾರ್ಕಿಕ ವಿವರಣೆ ನೀಡುವಂತೆ ಎನ್ಜಿಟಿ ಕೋರಿದೆ. 


ದ್ವಿಚಕ್ರ ವಾಹನಗಳು ಮತ್ತು ಮಹಿಳೆಯರಿಗೆ ವಿನಾಯಿತಿ ನೀಡಬೇಕೆಂದು ದೆಹಲಿ ಸರ್ಕಾರ ಎನ್ಜಿಟಿ ಬಳಿ ಮನವಿಮಾಡಿತ್ತು. ಆದರೆ ಎನ್ಜಿಟಿ ವಿನಾಯಿತಿ ನೀಡಲು ನಿರಾಕರಿಸಿತ್ತು. ನಂತರ ದೆಹಲಿ ಸರ್ಕಾರವು ನ.13 ರಿಂದ ಜಾರಿಗೊಳಿಸಿದ್ದ ಬೆಸ-ಸಮ ಯೋಜನೆಯನ್ನು ಹಿಂಪಡೆಡಿತ್ತು.