ಗುಜರಾತ್: ಇಂದು ನಸುಕಿನಲ್ಲಿ ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ 11 ಮಂದಿ ಮೃತಪಟ್ಟು, 17 ಜನ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅಪಘಾತ ಗುಜರಾತ್​ನ ವಡೋದರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ವಡೋದರ(Vadodara) ಹೈವೇ ರಸ್ತೆಯ ವಾಘೋಡಿಯಾ ಕ್ರಾಸಿಂಗ್ ಬಳಿ ಟ್ರಕ್​ಗಳು ಢಿಕ್ಕಿ ಹೊಡೆದಿವೆ.


ಖ್ಯಾತ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕಾರು ಅಪಘಾತ


ನಸುಕಿನ ಸುಮಾರು ಮೂರು ಗಂಟೆಗೆ ಈ ಘಟನೆ ನಡೆದಿದೆ. ಟ್ರಕ್ ನಲ್ಲಿದ್ದ ಪ್ರಯಣಿಕರೆಲ್ಲಾ ಸೂರತ್ ನಿಂದ ಪಾವಗಢದ ಕಡೆಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡವರನ್ನು ವಡೋದರದ ಎಸ್ ಎಸ್ ಜಿ ಹಾಸ್ಪತ್ರೆಗೆ ದಾಖಲಿಸಲಾಗಿದೆ.


Life certificate : 67 ಲಕ್ಷ EPS ಪಿಂಚಣಿದಾರರಿಗಾಗಿ ನೆಮ್ಮದಿ ಸುದ್ದಿ


ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯ್ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಮೃತಪಟ್ಟರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿದೆ.


ಈ ಬ್ಯಾಂಕಿನಿಂದ ತಿಂಗಳಿಗೆ ₹ 25,000 ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ಆದೇಶ