Nipah virus: ವಿದ್ಯಾರ್ಥಿನಿ ಸಾವಿನ ನಂತರ ಕೇರಳದಲ್ಲಿ ಎಚ್ಚರಿಕೆ, ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ!
Fear of Nipah virus: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿನಿಂದ 24 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರವು ತಕ್ಷಣ ಎಚ್ಚರಿಕೆ ನೀಡಿದೆ.
Fear of Nipah virus: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿನಿಂದ 24 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ತಕ್ಷಣ ಎಚ್ಚರಿಕೆ ನೀಡಿದೆ. ಸೋಂಕು ತಡೆಗಟ್ಟಲು ಸರ್ಕಾರವು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದು, ಸ್ಥಳೀಯ ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ. ಜನಸಂದಣಿ ಇರುವ ಪ್ರದೇಶಗಳಿಗೆ ಹೋಗದಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಇದರೊಂದಿಗೆ ಶಾಲಾ-ಕಾಲೇಜುಗಳು, ಟ್ಯೂಷನ್ ಸೆಂಟರ್‌ಗಳು, ಮದರಸಾಗಳು, ಅಂಗನವಾಡಿಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಆದರೆ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ನಿಫಾ ವೈರಸ್ ಅತ್ಯಂತ ಮಾರಣಾಂತಿಕ ವೈರಸ್ ಆಗಿದ್ದು, ಕೇರಳದಲ್ಲಿ ಮೊದಲು ಕಂಡುಬಂದಿದೆ. ಈ ವೈರಸ್ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಸೋಂಕು ಹರಡಬಹುದು. ಇದರ ಸೋಂಕು ವೇಗವಾಗಿ ಹರಡುತ್ತದೆ. ನಿಫಾ ವೈರಸ್ ಸೋಂಕಿತ ವ್ಯಕ್ತಿಯ ಆರಂಭಿಕ ರೋಗಲಕ್ಷಣಗಳ ನಂತರ, ಸ್ಥಿತಿಯು ಕ್ಷಣಮಾತ್ರದಲ್ಲಿ ಹದಗೆಡಬಹುದು ಮತ್ತು ಅದು ಮಾರಣಾಂತಿಕವಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ತುಪ್ಪ ಬಳಸಿ ನಿರ್ಮಿಸಿದ ವಿಶ್ವದ ಏಕೈಕ ದೇವಾಲಯವನ್ನು ನೀವು ಎಂದಾದರೂ ನೋಡಿದ್ದಿರಾ?
ಮಲಪ್ಪುರಂನಲ್ಲಿ ಎಚ್ಚರಿಕೆಯ ಕ್ರಮ!
ವಿದ್ಯಾರ್ಥಿಯ ಸಾವಿನ ನಂತರ, ಸ್ಥಳೀಯ ಆಡಳಿತವು ಸೋಂಕಿತ ಪ್ರದೇಶಗಳಲ್ಲಿ ಐದು ನಾಗರಿಕ ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಿದೆ. ಈ ಅವಧಿಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಶಾಲಾ-ಕಾಲೇಜುಗಳು, ಅಂಗನವಾಡಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇದಲ್ಲದೆ ಅಂಗಡಿಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನು ಸಹ ನಿಗದಿಪಡಿಸಲಾಗಿದೆ. ಜನಸಂದಣಿ ಮತ್ತು ಸಾಮಾಜಿಕ ಕೂಟಗಳನ್ನು ತಪ್ಪಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ಸೋಂಕು ಹರಡುವುದನ್ನು ತಡೆಯಲು ಶ್ರಮಿಸುತ್ತಿರುವಾಗ ಸಂಪರ್ಕಕ್ಕೆ ಬಂದ 175ಕ್ಕೂ ಹೆಚ್ಚು ಜನರನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಅವರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ. ಇದರೊಂದಿಗೆ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಇತರ ಜನರಿಗೂ ಸಹ ಎಚ್ಚರಿಸಲಾಗಿದೆ. ಇದರಿಂದ ಯಾವುದೇ ಹೊಸ ಸೋಂಕಿನ ಆಕ್ರಮಣವನ್ನು ತಡೆಯಬಹುದಾಗಿದೆ.
ನಿಫಾ ವೈರಸ್‌ನ ಲಕ್ಷಣಗಳು
- ತೀವ್ರ ಜ್ವರ
- ತಲೆನೋವು ಮತ್ತು ಸ್ನಾಯು ನೋವು
- ಗಂಟಲು ನೋವು
- ದೌರ್ಬಲ್ಯ ಮತ್ತು ಆಯಾಸ
- ಉಸಿರಾಟದ ತೊಂದರೆ
- ವಾಂತಿ ಮತ್ತು ಭೇದಿ
- ಗೊಂದಲ ಮತ್ತು ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ
ನಿಫಾ ವೈರಸ್ ಹೇಗೆ ಹರಡುತ್ತದೆ?
ನಿಫಾ ವೈರಸ್ ಸೋಂಕಿತ ಬಾವಲಿಗಳ ಮೂಲಕ ಹರಡುತ್ತದೆ. ಸೋಂಕಿತ ಬಾವಲಿಗಳ ದೇಹದ ದ್ರವಗಳಾದ ಲಾಲಾರಸ ಅಥವಾ ಮೂತ್ರದ ಸಂಪರ್ಕದ ಮೂಲಕ ವೈರಸ್ ಹರಡಬಹುದು. ಈ ವೈರಸ್ ಸೋಂಕಿತ ವ್ಯಕ್ತಿಯಿಂದ ಇತರ ಜನರಿಗೆ ಹರಡಬಹುದು, ಆದ್ದರಿಂದ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು ತಕ್ಷಣವೇ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ, ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ.
ಯುಎಇಯಿಂದ ಭಾರತಕ್ಕೆ ವಾಪಸಾಗುತ್ತಿರುವ ವ್ಯಕ್ತಿಯೊಬ್ಬನಿಗೆ Mpoxನ ಲಕ್ಷಣಗಳು ಕಂಡುಬಂದಿದೆ ಎಂದು ಶಂಕಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ.
ಯುಎಇಯಿಂದ ಹಿಂದಿರುಗಿದ 38 ವರ್ಷದ ವ್ಯಕ್ತಿಯನ್ನು ಶಂಕೆಯ ಮೇಲೆ ನಿಗಾ ಇರಿಸಲಾಗಿದೆ. ಕೇರಳದ ಎಡ್ವಾನಾದ ಈ ವ್ಯಕ್ತಿ ಕಳೆದ ವಾರ ಯುಎಇಯಿಂದ ಬಂದಿದ್ದರು. ಕೆಲವು ದಿನಗಳ ನಂತರ ವ್ಯಕ್ತಿಯ ದೇಹದ ಮೇಲೆ ದದ್ದುಗಳು ರೂಪುಗೊಂಡು ಜ್ವರವೂ ಕಾಣಿಸಿಕೊಂಡಿತ್ತು. ಈ ವ್ಯಕ್ತಿಯನ್ನು ಸೋಮವಾರ ಮಂಜೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕಗೊಳಿಸಲಾಗಿದೆ.
ಇದೀಗ ಈ ವ್ಯಕ್ತಿಯ ಮಾದರಿಗಳನ್ನು ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ತನಿಖಾ ವರದಿಗಾಗಿ ಕಾಯಲಾಗುತ್ತಿದೆ. ರೋಗಿಯ ಜ್ವರ ಕಡಿಮೆಯಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ವ್ಯಕ್ತಿಯನ್ನು ಪ್ರತ್ಯೇಕಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಶಂಕಿತ Mpox ಪ್ರಕರಣದ ಮಾದರಿಯ ಪರೀಕ್ಷಾ ವರದಿಗಾಗಿ ನಾವು ಕಾಯುತ್ತಿದ್ದೇವೆ ಅಂತಾ ಅವರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.