ನವದೆಹಲಿ: ನಿಫಾ ವೈರಸ್ ನ್ನು 12 ಗಂಟೆಗಳ ಒಳಗೆ ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಜೆ.ಪಿ.ನಡ್ದಾ ತಿಳಿಸಿದ್ದಾರೆ  


COMMERCIAL BREAK
SCROLL TO CONTINUE READING

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಡ್ದಾ ಅವರು  "12 ಗಂಟೆಗಳ ಒಳಗೆ ನಿಪಾ ವೈರಸ್  ನಿಯಂತ್ರಿಸಲಾಗಿದೆ. ವೈರಸ್ ಹರಡಿದ ನಂತರ ವೈದ್ಯರ ತಂಡ ಕೇರಳಕ್ಕೆ ತಲುಪಿ ರೋಗದ ನಿರ್ವಹಣೆ ಕುರಿತು ಚರ್ಚಿಸಿದ್ದಲ್ಲದೆ ಅದನ್ನು ನಿಯಂತ್ರಣಕ್ಕೆ ತರಲಾಗಿದೆ, ಸ್ವತಃ ವೈಯಕ್ತಿಕವಾಗಿ ನಾನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ" ಎಂದು ಸಚಿವರು ತಿಳಿಸಿದರು. 


ಈ ಹಿಂದೆ ಸಚಿವರು ನಿಸರ್ಗದಲ್ಲಾದ ಬದಲಾವಣೆಯ ಪರಿಣಾಮದಿಂದಾಗಿ ಈ ವೈರಸ್ ಹರಡಿದೆ ಎಂದು ತಿಳಿಸಿದ್ದರು. ಏಮ್ಸ್, ಸಫ್ದರ್ಜಂಗ್ ಆಸ್ಪತ್ರೆ, ಪುಣೆಯಲ್ಲಿನ ನ್ಯಾಷನಲ್ ವೈಜ್ಞಾನಿಕ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ವೈದ್ಯರು ಮತ್ತು ವಿಜ್ಞಾನಿಗಳು ಕೇರಳದಲ್ಲಿನ ಈ ರೋಗಾಣು ನಿಯಂತ್ರಣದ ಬಗ್ಗೆ ಗಮನಹರಿಸಿದ್ದಾರೆ ಎಂದು ತಿಳಿದುಬಂದಿದೆ. ಮೇ ತಿಂಗಳಲ್ಲಿ ನಿಫಾ ವೈರಸ್ ನಿಂದ  ಕೇರಳದಲ್ಲಿ ಸುಮಾರು 16 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.


ಈಗ ಮುನ್ನೆಚ್ಚರಿಕೆಯ ಕ್ರಮವಾಗಿ, ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಜೂನ್ 12 ರವರೆಗೆ ರಜೆ ಘೋಷಿಸಲಾಗಿದೆ ಎನ್ನಲಾಗಿದೆ.