ನವದೆಹಲಿ: ನಿರ್ಭಯಾ ಪ್ರಕರಣದ ಎಲ್ಲ ದೋಷಿಗಳ ಗಲ್ಲು ಶಿಕ್ಷೆಗೆ ನೂತನ ದಿನಾಂಕ ನಿಗದಿಯಾಗಿದೆ. ಈ ಕುರಿತು ಪಟಿಯಾಲಾ ಹೌಸ್ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ, ಮಾರ್ಚ್ 3ರಂದು ಬೆಳಗ್ಗೆ 6ಗಂಟೆಗೆ ಎಲ್ಲ ದೋಷಿಗಳಿಗೆ ಗಲ್ಲು ಶಿಕ್ಷೆ ನೀಡಲು ನಿರ್ಧರಿಸಲಾಗಿದೆ. ನಿರ್ಭಯಾ ಪ್ರಕರಣದ ಎಲ್ಲ ದೋಷಿಗಳ ವಿರುದ್ಧ ನೂತನವಾಗಿ ಡೆತ್ ವಾರಂಟ್ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ನ್ಯಾಯಪೀಠ ಕೈಗೆತ್ತಿಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಆಶಾ ದೇವಿ ಮಾರ್ಚ್ 3ರಂದು ಎಲ್ಲ ದೋಷಿಗಳಿಗೆ ಗಲ್ಲುಶಿಕ್ಷೆಯಾಗಲಿದೆ ಎಂಬುದನ್ನು ತಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಅತ್ತ ಇನ್ನೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಂದೆ ಇದೊಂದು ಒಳ್ಳೆಯ ಬೆಳವಣಿಗೆ, ಜನರು ತುಂಬಾ ಖುಷಿಯಾಗಿದ್ದಾರೆ, ಇಡೀ ದೇಶ ಖುಷಿಯಾಗಿದೆ. ಇದೀಗ ಎಲ್ಲ ದೋಷಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ. ದೋಷಿಗಳ ಮನದಲ್ಲಿ ಇದರಿಂದ ಭಯ ಹುಟ್ಟಿಕೊಳ್ಳಲಿದ್ದು, ಅವರಿಗೆ ಸಿಗುವ ಈ ದಂಡದಿಂದ ಅಪರಾಧ ನಿಲ್ಲಲಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಕರಣದ ಕುರಿತು ಈ ಹಿಂದೆ ನಡೆದ ವಿಚಾರಣೆಯಲ್ಲಿ ಪವನ್ ತನಗೆ ಯಾವುದೇ ವಕೀಲನ ಅಗತ್ಯವಿಲ್ಲ ಎಂದು ಹೇಳಿದ್ದಾನೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.  ಈ ವೇಳೆ ದೆಹಲಿ ಸರ್ಕಾರದ ಪರ ವಕೀಲರು ಪವನ್ ಸರ್ಕಾರಿ ವಕೀಲರ ನೆರವು ಪಡೆಯಲು ತಿರಸ್ಕರಿಸಿದ್ದಾನೆ ಎಂದಿದ್ದರು. ಹೀಗಾಗಿ ಹೊಸ ಡೆತ್ ವಾರೆಂಟ್ ಬಿಡುಗಡೆಗೊಳಿಸಬೇಕು ಎಂದು ತಿಹಾರ್ ಜೈಲು ಅಧಿಕಾರಿಯಾಗಳು ನ್ಯಾಯಾಲನಕ್ಕೆ ಮನವಿ ಸಲ್ಲಿಸಿದ್ದರು.


ಡಿಸೆಂಬರ್ 16, 2012ಕ್ಕೆ ರಲ್ಲಿ ನಡೆದ ನಿರ್ಭಯಾ 'ಹ'ತ್ಯಾಚಾರ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಈ ಘಟನೆಯಲ್ಲಿ ಒಟ್ಟು ಆರು ದುಷ್ಕರ್ಮಿಗಳು 23 ವರ್ಷ ವಯಸಿನ ಯುವತಿಯ ಮೇಲೆ ಚಲಿಸುವ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಬಾರ್ಬರವಾಗಿ ಹಲ್ಲೆ ನಡೆಸಿದ್ದರು. ಬಳಿಕ ವಿದ್ಯಾರ್ಥಿನಿ ಮೃತಪಟ್ಟಿದ್ದಳು.