ಫೆಬ್ರವರಿ 16 ಕ್ಕೆ ನಿರ್ಭಯಾ ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರಿಂ ಕೋರ್ಟ್
ನವದೆಹಲಿ: ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿನಯ್ ಮತ್ತು ಪವನ್ ಅವರು ಸೋಮವಾರ ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಲು ಹೆಚ್ಹು ಸಮಯ ಕೇಳಿರುವುದರಿಂದಾಗಿ ಸುಪ್ರೀಂ ಕೋರ್ಟ್ ಫೆಬ್ರವರಿ 16 ರಂದು ನಿರ್ಭಯ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.
ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಅಕ್ಷಯ್, ಪವನ್, ವಿನಯ್ ಶರ್ಮಾ ಮತ್ತು ಮುಕೇಶ್ ಅವರು ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿದೆ. 2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ಚಲಿಸುತ್ತಿರುವ ಬಸ್ನಲ್ಲಿ ಆರು ಮಂದಿ 23 ವರ್ಷ ವಯಸ್ಸಿನ ಫಿಶಿಯೋಥೆರಪಿ ಇಂಟರ್ನ್ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಎಸಗಿದ್ದರು. ಇದರಿಂದ ಆ ಮಹಿಳೆಯು ತೀವ್ರವಾಗಿ ಗಾಯಗೊಂಡು ಸಿಂಗಾಪೂರ್ ಆಸ್ಪತ್ರೆಯಲ್ಲಿ ಡಿಸೆಂಬರ್ 29, 2012ರಂದು ಮೃತಪಟ್ಟಿದ್ದಳು.
ಈ ಆರೋಪಿಯಲ್ಲಿ ಒಬ್ಬರಾದ ರಾಮ್ ಸಿಂಗ್ ಜೈಲಿನಲ್ಲಿ ಸ್ವತಃ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಮೂರು ವರ್ಷಗಳ ಕಾಲ ಬಾಲ ಕಾರಾಗೃಹ ಮನೆಯಲ್ಲಿ ಶಿಕ್ಷೆಯನ್ನು ನೀಡಲಾಗಿದೆ.