ಕೊರೊನಾ ಪ್ರಕರಣ ಹೆಚ್ಚಳ: ಭಾರತೀಯ ಭಕ್ತರಿಗೆ ನೋ ಎಂಟ್ರಿ ಎಂದ ನಿತ್ಯಾನಂದನ ಕೈಲಾಸ
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ ಸ್ವಯಂ-ಶೈಲಿಯ ದೇವಮಾನವ ನಿತ್ಯಾನಂದ `ಕೈಲಾಸಕ್ಕೆ ಭಾರತದಿಂದ ಆಗಮಿಸುವ ಭಕ್ತರ ಮೇಲೆ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ ಸ್ವಯಂ-ಶೈಲಿಯ ದೇವಮಾನವ ನಿತ್ಯಾನಂದ 'ಕೈಲಾಸಕ್ಕೆ ಭಾರತದಿಂದ ಆಗಮಿಸುವ ಭಕ್ತರ ಮೇಲೆ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : AK Walia: ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ವಾಲಿಯಾ ಕೊರೋನಾಗೆ ಬಲಿ!
ತಮ್ಮ 'ಪ್ರೆಸಿಡೆನ್ಶಿಯಲ್ ಮ್ಯಾಂಡೇಟ್' ನಲ್ಲಿ, ನಿತ್ಯಾನಂದರು ಕೇವಲ ಭಾರತೀಯರು ಮಾತ್ರವಲ್ಲ, ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾದ ಪ್ರಯಾಣಿಕರೂ ಸಹ ದ್ವೀಪಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ವಿಶ್ವದಾದ್ಯಂತ ಹೆಚ್ಚುತ್ತಿರುವ COVID-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Corona vaccination : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಇಲ್ಲಿದೆ ಅತಿ ಮುಖ್ಯ ಮಾಹಿತಿ
ಇತ್ತೀಚಿನ ಹೇಳಿಕೆಯಲ್ಲಿ, ಎಲ್ಲಾ ಕೈಲಾಸಿಯನ್ನರು, ಎಕೈಲೇಶಿಯನ್ನರು, ಕೈಲಾಸಾದ ಈ ರಾಯಭಾರ ಕಚೇರಿಗಳಿಗೆ ಸಂಬಂಧಿಸಿದ ಸ್ವಯಂಸೇವಕರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು ಮತ್ತು ಸ್ಥಳೀಯ ಕಾನೂನುಗಳು ಸಲಹೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು" ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ : Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ
ಈ ಹಿಂದೆ ನಿತ್ಯಾನಂದರು ತಮ್ಮ 'ಹಿಂದೂ ಸಾರ್ವಭೌಮ ರಾಷ್ಟ್ರ'ದ ಬಗ್ಗೆ ವಿಡಿಯೋ ಮತ್ತು ಟ್ವೀಟ್‌ಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಆಗಸ್ಟ್ 2020 ರಲ್ಲಿ, ನಿತ್ಯಾನಂದ ಅವರು ತಮ್ಮದೇ ಆದ 'ರಿಸರ್ವ್ ಬ್ಯಾಂಕ್ ಆಫ್ ಕೈಲಾಸ'ವನ್ನು ಪ್ರಾರಂಭಿಸಿದರು.ದ್ವೀಪದ ಅಧಿಕೃತ ಕರೆನ್ಸಿಯನ್ನು 'ಕೈಲಾಶಿಯನ್ ಡಾಲರ್' ಎಂದು ಘೋಷಿಸಲಾಯಿತು. ಅವರು ತಮ್ಮನ್ನು ಕೈಲಾಸದ 'ಸುಪ್ರೀಂ ಮಠಾಧೀಶ' ಎಂದು ಉಲ್ಲೇಖಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.