ನವದೆಹಲಿ: ಇತ್ತೀಚೆಗೆ ಭಾರತವನ್ನು ತೊರೆದಿರುವ ಸ್ವಯಂ ಘೋಷಿತ ದೇವಮಾನ ನಿತ್ಯಾನಂದ, ಈಗ ಈಕ್ವೆಡಾರ್ನಿಂದ ಖಾಸಗಿ ದ್ವೀಪವನ್ನು ಖರೀದಿಸಿದ ನಂತರ ಈಗ ತನ್ನದೇ ಆದ ರಾಷ್ಟ್ರವನ್ನು ಪ್ರಾರಂಭಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಈ ದ್ವೀಪಕ್ಕೆ 'ಕೈಲಾಸ' ಎಂದು ಹೆಸರಿಸಿದ್ದು, ಈ ದ್ವೀಪ ರಾಷ್ಟ್ರಕ್ಕಾಗಿ ಧ್ವಜ, ಪಾಸ್‌ಪೋರ್ಟ್ ಮತ್ತು ಲಾಂಛನವನ್ನು ಈಗಾಗಲೇ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಅವರು ಪ್ರಧಾನ ಮಂತ್ರಿ ನೇತೃತ್ವದ ಕ್ಯಾಬಿನೆಟ್ ಅನ್ನು ಸಹ ನೇಮಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಟ್ರಿನಿಡಾಡ್ ಮತ್ತು ಟೊಬಾಗೊಕ್ಕೆ ಸಮೀಪದಲ್ಲಿರುವ ಈ ದ್ವೀಪವನ್ನು ಹಿಂದೂ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಲಾಗಿದೆ ಎಂದು ವರದಿಯಾಗಿದೆ.


ಈ ನೂತನ ಹೊಸ ರಾಷ್ಟ್ರ ದೇವಾಲಯ ಆಧಾರಿತ ಪರಿಸರ ವ್ಯವಸ್ಥೆ, ಮೂರನೇ ಕಣ್ಣಿನ ಹಿಂದಿನ ವಿಜ್ಞಾನ, ಯೋಗ, ಧ್ಯಾನ ಮತ್ತು ಗುರುಕುಲ ಶಿಕ್ಷಣ ವ್ಯವಸ್ಥೆ, ಸಾರ್ವತ್ರಿಕ ಉಚಿತ ಆರೋಗ್ಯ ರಕ್ಷಣೆ, ಉಚಿತ ಶಿಕ್ಷಣ ಮತ್ತು ಎಲ್ಲರಿಗೂ ಉಚಿತ ಆಹಾರವನ್ನು ನೀಡುತ್ತದೆ ಎಂದು ಅವರ ಆಶ್ರಮದ ವೆಬ್‌ಸೈಟ್ ಹೇಳಿದೆ. ಈ ಸೈಟ್ ನಲ್ಲಿ ,ಅವರು ಗುರು ದೇಣಿಗೆಗಳನ್ನು ಬಯಸುತ್ತಿದ್ದು ,ಪ್ರಪಂಚದಾದ್ಯಂತದ ಜನರನ್ನು ತಮ್ಮ ರಾಷ್ಟ್ರದ ಪ್ರಜೆಗಳಾಗಲು ಆಹ್ವಾನಿಸುತ್ತಿದ್ದಾರೆ ಎನ್ನಲಾಗಿದೆ.


2010 ರಲ್ಲಿ ತಮಿಳುನಾಡು ಮೂಲದ ನಿತ್ಯಾನಂದ ಅವರು ನಟಿಯೊಂದಿಗೆ ರಾಜಿ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದ ವಿಡಿಯೋವೊಂದು ವೈರಲ್ ಆದ ನಂತರ ಅವರು ಸುದ್ದಿಗೆ ಬಂದಿದ್ದರು.ಈಗ ಕರ್ನಾಟಕದಲ್ಲಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ನಿತ್ಯಾನಂದ ಅವರು ಇತ್ತೀಚೆಗೆ ಭಾರತದಿಂದ ಪರಾರಿಯಾಗಿದ್ದಾರೆ.