ನವದೆಹಲಿ: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್.ಡಿ.ಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದ ನಂತರ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಆರೆಸೆಸ್ಸ್ ನಾಯಕರ ನಡುವಿನ ಭೇಟಿ ಈಗ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಅಂತಿಮ ಫಲಿತಾಂಶಕ್ಕೆ ಕೇವಲ ಎರಡು ದಿನಗಳು ಬಾಕಿ ಇದ್ದು, ಇದಕ್ಕೂ ಮೊದಲು ಈಗ ನಿತಿನ್ ಗಡ್ಕರಿ ಹಾಗೂ ಆರೆಸೆಸ್ಸ್ ನ ಭೈಯ್ಯಾಜಿ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ನಿತಿನ್ ಗಡ್ಕರಿಯವರ ನಿಕಟವರ್ತಿಗಳು ಹೇಳುವಂತೆ ಇದೊಂದು ಸೌಜನ್ಯದ ಭೇಟಿಯಾಗಿದೆ. ಚುನಾವಣೋತ್ತರ ಸಮೀಕ್ಷೆ ಹಿನ್ನಲೆಯಲ್ಲಿ ನಿತಿನ್ ಗಡ್ಕರಿಯವರ ಪಾತ್ರದ ಕುರಿತಾಗಿ ಚರ್ಚಿಸಲಾಗಿದೆ. ಆರೆಸೆಸ್ಸ್ ಗೆ ಗಡಕರಿ ಹತ್ತಿರವಿರುವುದರಿಂದ ಮುಂದಿನ ಸರ್ಕಾರದಲ್ಲಿ ಮಹತ್ವದ ಸ್ಥಾನ ನೀಡುವ ಸಾಧ್ಯತೆ ಬಗ್ಗೆ  ಕೂಡ ಈ ಭೇಟಿಯ ವೇಳೆ ಚರ್ಚಿಸಲಾಗಿದೆ ಎನ್ನಲಾಗಿದೆ. 


ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆಯ ಪ್ರಾರಂಭದಲ್ಲಿ ಮಾತನಾಡುತ್ತಾ ಗಡ್ಕರಿ ಚುನಾವಣೆ ಸಮೀಕ್ಷೆಗಳು ಅಂತಿಮ ನಿರ್ಧಾರವಲ್ಲ, ಆದರೆ ಎನ್ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಪುನಃ ಅಧಿಕಾರಕ್ಕೆ ಬರಲು ಸಹಾಯವಾಗುತ್ತವೆ ಎಂದು ಹೇಳಿದ್ದರು.