ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಾಸಕಾಂಗ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 19ಕ್ಕೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ನಿತೀಶ್ ಕುಮಾರ್ ರವರು 1991 ರಲ್ಲಿ ಬಿಹಾರದ ಬರ್ಹ್ ಕ್ಷೇತ್ರದ ಲೋಕಸಭಾ ಉಪಚುನಾವಣೆಗೆ ಮುಂಚೆ ಸ್ಥಳೀಯ ಕಾಂಗ್ರೆಸ್ ನಾಯಕ ಸೀತಾರಾಮ್ ಸಿಂಗ್ ಅವರನ್ನು ಕೊಂದು, ನಾಲ್ವರನ್ನು ಗಾಯಗೊಳಿಸಿದ ವಿಚಾರವಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ, ಆದ್ದರಿಂದ ಅವರ ಶಾಸಕಾಂಗ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಆರೋಪಿಸಿದೆ. 2017 ರ ಡಿಸೆಂಬರ್ 8 ರಂದು ನ್ಯಾಯಾಲಯವು ನಿತೀಶ್ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಅವರ ವಿರುದ್ಧದ ಚುನಾವಣಾ ವರದಿಗಳ ಬಗ್ಗೆ ಮತ್ತು ಎಫ್ಐಆರ್ ಬಗ್ಗೆ ಬಹಿರಂಗಪಡಿಸದ ಕಾರಣ  ಅರ್ಜಿಯನ್ನು ಮುಂದೂಡಲಾಗಿತ್ತು.


2017 ರ ಜುಲೈನಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪಾಂಡರಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ನಿತೀಶ್ ರು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದರು .ಆದರೆ ಜೆಡಿ (ಯು) ಇದನ್ನು ಅಲ್ಲಗಳೆದಿದೆ.1991 ರ ನವೆಂಬರ್ 17 ರಂದು ದಾಖಲಾದ ಎಫ್ಐಆರ್ ನಲ್ಲಿ  ನಿತೀಶ್ ಸೇರಿದಂತೆ ಐದು ಮಂದಿ ಆರೋಪಿಗಳೆಂದು ಆರೋಪಿಸಲಾಗಿದೆ.