7ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಡಿಸಿಎಂ ಸ್ಥಾನಯಾರಿಗೆ ಗೊತ್ತಾ?
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಗು ಚೌಹಾಣ್ ನಿತೀಶ್ ಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್, ರಾಜ್ಯದ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಇನ್ನು ಬಿಜೆಪಿ(BJP)ಯಿಂದ ತಾರ್‌ಕಿಶೋರ್ ಪ್ರಸಾದ್ ಹಾಗೂ ರೇಣುದೇವಿ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಬಿಹಾರಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು ದೊರೆತಂತಾಗಿದೆ.
Alert...! WhatsApp Payments ಬಳಸುವ ಮುನ್ನ ಈ ಸುದ್ದಿ ಓದಿ...
ಇನ್ನು ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಏಳನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದು, ನಿತೀಶ್ ಅವರ ಪಾಲಿಗೆ ಇದೊಂದು ಅಪರೂಪದ ದಾಖಲೆಯಾಗಿದೆ. ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಜೆಡಿಯು ಪಕ್ಷದ ಹಲವು ಗಣ್ಯರು ಭಾಗವಹಿಸಿದ್ದರು.
Life Insuranceಗೆ ಮುಂದುವರೆಯಲಿದೆ ಈ ಆನ್ಲೈನ್ ಸೌಕರ್ಯ, ನೀವು ಲಾಭ ಪಡೆಯಿರಿ
ಇಂದು ಪ್ರಮಾಣವಚನ ಸ್ವೀಕರಿಸಿದ ಗಣ್ಯರು:
1. ನಿತೀಶ್ ಕುಮಾರ್: ಮುಖ್ಯಮಂತ್ರಿ
2. ತಾರ್‌ಕಿಶೋರ್ ಪ್ರಸಾದ್: ಉಪ ಮುಖ್ಯಮಂತ್ರಿ
3. ರೇಣುದೇವಿ: ಉಪ ಮುಖ್ಯಮಂತ್ರಿ: ಕ್ಯಾಬಿನೆಟ್ ಸಚಿವ
4. ವಿಜಯ್ ಕುಮಾರ್ ಚೌಧರಿ: ಕ್ಯಾಬಿನೆಟ್ ಸಚಿವ
5. ವಿಜೇಂದ್ರ ಪ್ರಸಾದ್ ಯಾದವ್: ಕ್ಯಾಬಿನೆಟ್ ಸಚಿವ
6. ಅಶೋಕ್ ಚೌಧರಿ: ಕ್ಯಾಬಿನೆಟ್ ಸಚಿವ
7.ಮೇವಾಲ್ ಲಾಲ್ ಚೌಧರಿ: ಕ್ಯಾಬಿನೆಟ್ ಸಚಿವ
ಕೆಲಸ ಬಿಟ್ಟ ತಕ್ಷಣ ನಿಮ್ಮ PF ವಿತ್ ಡ್ರಾʼ ಮಾಡ್ಲೇಬೇಡಿ: ಯಾಕೆ ಗೊತ್ತಾ?
ಇನ್ನ ವಿಪಕ್ಷ ಮಹಾಘಟಬಂಧನ್ ಮೈತ್ರಿಕೂಟ ನಿತೀಶ್ ಕುಮಾರ್ ಪದಗ್ರಹಣ ಸಮಾರಂಭವನ್ನು ಬಹಿಷ್ಕರಿಸಿದ್ದು, ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಕ್ರಮ ಮಾರ್ಗದ ಮೂಲಕ ಸರ್ಕಾರ ರಚಿಸಿದೆ ಎಂದು ಆರೋಪಿಸಿದೆ. ಇನ್ನು ಬಿಹಾರ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರಿಗೆ, ಕೇಂದ್ರ ಸಂಪುಟದಲ್ಲಿ ಮಹತ್ವದ ಹುದ್ದೆ ನೀಡುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.