ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ನಾಯಕ ಅರಿಜಿತ್ ಶಾಶ್ವತ ನನ್ನು ಜೈಲಿಗೆ ಕಳುಹಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೋಮು ಹಿಂಸಾಚಾರವನ್ನು ನಿಭಾಯಿಸಲು ತೀಕ್ಷ್ಣ ಕ್ರಮ ಕೈಗೊಳ್ಳಲು ಆದೇಶಿಸಿರುವ  ನಿತೀಶ್ ಕುಮಾರ್ ಇಂದು ಮೌನವನ್ನು ಮುರಿದು "ಶಾಂತಿ, ಕೋಮು ಸೌಹಾರ್ದತೆ ಮತ್ತು ಸಹೋದರತ್ವಕ್ಕಾಗಿ ನಾವು ಬದ್ಧರಾಗಿದ್ದೇವೆ ಮತ್ತು ಯಾರಾದರೂ ಅದಕ್ಕೆ ಧಕ್ಕೆ ತಂದರೆ, ಅಂತಹವರನ್ನು  ಜೈಲಿಗೆ ಕಳುಹಿಸಲಾಗುತ್ತದೆ.ಎಂದು ತಿಳಿಸಿದ್ದಾರೆ.
 
ಈ ಹಿಂದೆ ಲಾಲು ಪ್ರಸಾದ ರವರ ಆರ್ ಜೆಡಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ನಿತೀಶ್ ಕುಮಾರ್ ರವರು ನಂತರ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿಯ ಜೊತೆಗೆ ಕೈ ಜೋಡಿಸಿದ್ದರು.


ಈಗ ಬಿಜೆಪಿ ನಾಯಕ ಅರಿಜಿತ್ ಶಾಶ್ವತ ರನ್ನು ಬಿಹಾರದಲ್ಲಿ ರಾಮನವಮಿ ದಿನದಂದು ನಡೆದ ಕೋಮು ಹಿಂಸಾಚಾರದ ವಿಚಾರವಾಗಿ ಬಂಧಿಸುವುದರ ಮೂಲಕ ಬಿಜೆಪಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದಾರೆ,ಆ ಮೂಲಕ 2019 ರ ಚುನಾವಣೆಗೂ ಪೂರ್ವವಾಗಿ ಮತ್ತೆ  ಬಿಜೆಪಿಯೊಂದಿಗಿನ ತಮ್ಮ ರಾಜಕೀಯ ನಿಲುವನ್ನು ಮರುಪರಿಶೀಲನೆ ಒಳಪಡಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆಯೇ ಎನ್ನುವುದಕ್ಕೆ ಈ ಘಟನೆ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡುತ್ತದೆ.