ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ -ಅವಿಶ್ವಾಸ ಮತವು  ಬಹುಮತದ ಮತ್ತು  ನೈತಿಕತೆ ನಡುವೆ ನಡೆದದ್ದು ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

"15 ವರ್ಷಗಳ ನಂತರ,ಅವಿಶ್ವಾಸಮತ ಪ್ರಸ್ತಾವವು ವಿರೋಧ ಪಕ್ಷಗಳಿಂದ ಮಂಡಿಸಲ್ಪಟ್ಟಿದೆ,ನಮಗೆ ಗೊತ್ತು  ಅವರಿಗೆ ಬಹುಮತ ಹೊಂದಿದ್ದಾರೆ ಎಂದು ಆದರೆ ಈ ನಡೆ  ಬಹುಮತ ಮತ್ತು ನೈತಿಕತೆಯ ನಡೆದದ್ದು ಎಂದು " ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ವಿಶ್ವಾಸಮತದ ಗೆಲುವಿನ ನಂತರ,  ಆಂಧ್ರ ಪ್ರದೇಶಕ್ಕೆ ಮತ್ತೊಮ್ಮೆ ದ್ರೋಹ ಮಾಡಿದ್ದಾರೆ ಎಂದು ತಿಳಿಸಿದರು.ತೆಲುಗು ದೇಶಂ ಪಕ್ಷ (ಟಿಡಿಪಿ) ಸಂಸದ ಜಯದೇವ್ ಗಲ್ಲಾ ಅವರು ಆಂಧ್ರಪ್ರದೇಶವನ್ನು ದುರ್ಬಲಗೊಳಿಸಲು ಪ್ರಧಾನಿ ಮೋದಿ ಟಿಡಿಪಿಯ ಪ್ರತಿಸ್ಪರ್ಧಿಗಳೊಂದಿಗೆ ನಿಂತಿದ್ದಾರೆ ಎಂದು ಕಿಡಿ ಕಾರಿದ್ದರು.


ಶುಕ್ರವಾರದಂದು  ಪ್ರತಿಪಕ್ಷಗಳು ಮಂಡಿಸಿದ್ದ  ಅವಿಶ್ವಾಸ ಮತದಲ್ಲಿ 325 ಸದಸ್ಯರು ಸರಕಾರದ ಪರವಾಗಿ ಬೆಂಬಲಿಸಿದರೆ,ಕೇವಲ 126 ಸದಸ್ಯರು ಮಾತ್ರ ಸರ್ಕಾರಕ್ಕೆ ವಿರುದ್ದವಾಗಿ ಮತವನ್ನು ಚಲಾಯಿಸಿದ್ದರು. ಎನ್ಡಿಎ ಮಿತ್ರ ಶಿವಸೇನಾ ಮತದಾನದಿಂದ ಹೊರಗುಳಿದಿತ್ತು.